KPSC daily notes - 01 | Notes for upcoming exams like SDA, Group C, PSI, PDO etc.....

 ಸಂವಿಧಾನ - 10


1) ಯಾವ ವಿಧಿಯು ರಾಷ್ಟ್ರಪತಿಗಳು ಕ್ಷಮಾದಾನ ನೀಡುವ ಅಧಿಕಾರದ ಬಗ್ಗೆ ತಿಳಿಸುತ್ತದೆ?

ಉ. 72 ನೇ ವಿಧಿ


2) ರಾಷ್ಟ್ರೀಯ ತುರ್ತು ಪರಿಸ್ಥಿತಿ ಎಷ್ಟು ಬಾರಿ ಹೇಳಲಾಗಿದೆ?

ಉ. 3 ಬಾರಿ


3) ಅಧಿಕಾರದಲ್ಲಿದ್ದಾಗಲೇ ಮರಣ ಹೊಂದಿದ ಮೊದಲ ರಾಷ್ಟ್ರಪತಿ ಯಾರು?

ಉ. ಜಾಕಿರ್ ಹುಸೇನ್

        - ಮೊದಲ ಮುಸ್ಲಿಂ ರಾಷ್ಟ್ರಪತಿ


4) ಯಾವ ರಾಷ್ಟ್ರಪತಿ ಕಾರ್ಯಕಾಲದಲ್ಲಿ ಅತಿಹೆಚ್ಚು ಪ್ರಧಾನಮಂತ್ರಿಗಳು ಕಾರ್ಯನಿರ್ವಹಿಸಿದರು?

ಉ. ಶಂಕರ ದಯಾಳ ಶರ್ಮ

        - 4 ಪ್ರಧಾನ ಮಂತ್ರಿಗಳು


5) ಅತಿ ಹೆಚ್ಚು ಕ್ಷಮಾದಾನದ ನೀಡಿದ ರಾಷ್ಟ್ರಪತಿ ಯಾರು?

ಉ. ಪ್ರತಿಭಾ ದೇವಿಸಿಂಗ್ ಪಾಟೀಲ್

   

6) ರಾಜ್ಯಸಭೆಯ ಪದನಿಮಿತ್ತ ಅಧ್ಯಕ್ಷರು ಯಾರು?

ಉ. ಉಪರಾಷ್ಟ್ರಪತಿಗಳು


7) ರಾಷ್ಟ್ರಪತಿ ಹುದ್ದೆ ಖಾಲಿಯಾದಾಗ ಎಷ್ಟು ಸಮಯದ ಒಳಗೆ ಚುನಾವಣೆ ನಡೆಸಬೇಕು? ಉ. ಆರು ತಿಂಗಳು

       - 62 ನೇ ವಿಧಿ ಪ್ರಕಾರ


8) ಭಾರತದ ಅಲಿಪ್ತ ನೀತಿಯ ಹರಿಕಾರ ಎಂದು ಯಾರನ್ನು ಕರೆಯುತ್ತಾರೆ?

ಉ. ಜವಾಹರ್ ಲಾಲ್ ನೆಹರು


9) ಅತಿ ಹೆಚ್ಚು ಬಾರಿ ಕೇಂದ್ರ ಬಜೆಟ್ ಮಂಡಿಸಿದವರು ಯಾರು?

ಉ. ಮೊರಾರ್ಜಿ ದೇಸಾಯಿ


10) ಭಾರತದ ಅತ್ಯುನ್ನತ ಪ್ರಶಸ್ತಿ ಭಾರತ ರತ್ನ ಮತ್ತು ಪಾಕಿಸ್ತಾನದ ಅತ್ಯುನ್ನತ ಪ್ರಶಸ್ತಿ ಪಡೆದ ಭಾರತದ ಪ್ರಧಾನಿ ಯಾರು?

ಉ. ಮೊರಾರ್ಜಿ ದೇಸಾಯಿ


ಇತಿಹಾಸ - 10


1) ಇತಿಹಾಸದ ಪಿತಾಮಹ ಯಾರು?

ಉ. ಹೆರೋಡೋಟಸ್


2) ವಿಕ್ರಮಂಕದೇವಚರಿತ ಕೃತಿ ಬರೆದವರು ಯಾರು?

ಉ. ಬಿಲ್ಹಣ


3) ಯಾರನ್ನು ಪ್ರವಾಸಿಗಳ ರಾಜ ಎನ್ನುವರು? 

ಉ. ಹ್ಯೂಯನ್ ತ್ಸಾಂಗ್


4) ಶಾಸನಗಳ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?

ಉ. B. L. ರೈಸ್


5) ಯಜ್ಞಗಳ ಆಚರಣೆ ಬಗ್ಗೆ ಯಾವ ವೇದದಲ್ಲಿ ಉಲ್ಲೇಖವಿದೆ? 

ಉ. ಯಜುರ್ವೇದ


6) ಪ್ರಸಿದ್ಧ ಗಾಯತ್ರಿ ಮಂತ್ರ ಯಾವ ವೇದದಲ್ಲಿದೆ?

ಉ. ಋಗ್ವೇದ

         - ವಿಶ್ವಾಮಿತ್ರ ರಚಿಸಿದ್ದು


7) ಯಾವುದನ್ನು ನಾಗರಿಕತೆಗಳ ತೊಟ್ಟಿಲು ಮತ್ತು ಸಮಾಧಿ ಎನ್ನುವರು?

ಉ. ಮೆಸೆಪೆಟೋಮಿಯಾ ನಾಗರಿಕತೆ


8) ಸೇಡಿಗೆ ಸೇಡು ಮುಯ್ಯಿಗೆ ಮುಯ್ಯಿ ಕಣ್ಣಿಗೆ ಕಣ್ಣು ಎಂಬ ಯಾರದ್ದು?

ಉ. ಹಮ್ಮೂರಬಿ


9) ಚೀನಾ ನಾಗರಿಕತೆಯ ಮೊದಲ ರಾಜಮನೆತನ ಯಾವುದು?

ಉ. ಶಾಂಘ


10) ಭೂಕೇಂದ್ರ ಸಿದ್ದಾಂತವನ್ನು ಯಾರು ಮಂಡಿಸಿದರು? 

ಉ. ಟಾಲಮಿ


ವಿಜ್ಞಾನ - 10


1) ವಿಶ್ವದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿರುವ & ಅತಿ ಹಗುರ  ಮೂಲವಸ್ತು  ಯಾವುದು? 

ಉ. ಜಲಜನಕ


2) ಭೂಮಿಯ ತೊಗಟೆಯಲ್ಲಿರುವ ಅತಿ ಹೆಚ್ಚು ಪ್ರಮಾಣದಲ್ಲಿ ಕಂಡು ಬರುವ ಮೂಲವಸ್ತು ಯಾವುದು?

ಉ. ಆಮ್ಲಜನಕ


3) ಪಾದರಸ ಸೇವನೆಯಿಂದ ಯಾವ ರೋಗ ಬರುತ್ತದೆ? 

ಉ. ಮೀನಾಮಾಟ ರೋಗ


4) ಜಲಪಾಷಣ ಎಂದು ಯಾವುದನ್ನು ಕರೆಯುತ್ತಾರೆ?

ಉ. ರಂಜಕ


5) ವಜ್ರದ ನಂತರ ಎರಡನೇ ಗಟ್ಟಿಯಾದ ವಸ್ತು ಯಾವುದು?

ಉ. ಸಿಲಿಕಾನ್ ಕಾರ್ಬೈಡ್


6) ಪ್ರೋಟಾನ್ ಕಂಡು ಹಿಡಿದವರು ಯಾರು? 

ಉ. ರುದರ್ ಫೋರ್ಡ್


7) ಎಲೆಕ್ಟ್ರಾನ್ ಕಂಡು ಹಿಡಿದವರು ಯಾರು? 

ಉ. ಜೆ ಜೆ ಥಾಮ್ಸನ್


8) ತುಕ್ಕು ಹಿಡಿಯದಿರಲು ಏನನ್ನು ಲೇಪನ ಮಾಡಲಾಗುತ್ತದೆ?

ಉ. ಸತುವಿನ ಲೇಪನ


9) ಕೆಂಪು ಇರುವೆ ಕಚ್ಚಿದಾಗ ಯಾವ ಆಮ್ಲ ಬಿಡುಗಡೆಯಾಗುತ್ತದೆ? 

ಉ. ಫಾರ್ಮಿಕ್ ಆಮ್ಲ


10) ಮೃದು ಪಾನೀಯಗಳಲ್ಲಿ ಯಾವ ಆಮ್ಲ ಬಳಸಲಾಗುತ್ತದೆ? 

ಉ. ಕಾರ್ಬೋನಿಕ್ ಆಮ್ಲ


ಭೂಗೋಳಶಾಸ್ತ್ರ - 10


1) ಭಾರತದ ಜೊತೆ ಅತಿ ಉದ್ದದ ಗಡಿಯನ್ನು ಹೊಂದಿರುವ ದೇಶ ಯಾವುದು?

ಉ. ಬಂಗ್ಲಾದೇಶ


2) ಭಾರತದ ಅತಿ ಎತ್ತರದ ಶಿಖರ ಯಾವುದು? 

ಉ. ಕೆ2 ಅಥವಾ ಮೌಂಟ್ ಗಾಡ್ವಿನ್ ಆಸ್ಟಿನ್


3) ಜಗತ್ತಿನ ಅತಿ ಎತ್ತರದ ರಸ್ತೆ ಮಾರ್ಗ ಯಾವುದು?

ಉ. ಲೇಹ ಮತ್ತು ಮನಾಲಿ


4) ಭೂಮಿಯ ಮೇಲಿನ ಅತಿ ಎತ್ತರದ ಯುದ್ಧ ಭೂಮಿ ಯಾವುದು?

ಉ. ಸಿಯಾಚಿನ್


5) ಭಾರತದ ಅತಿ ದೊಡ್ಡ ದ್ವೀಪ ಯಾವುದು? 

ಉ. ಮಜೂಲಿ ದ್ವೀಪ


6) ಪ್ರಪಂಚದ ಅತಿ ದೊಡ್ಡ ದ್ವೀಪ ಯಾವುದು? 

ಉ. ಗ್ರೀನ್ಲ್ಯಾಂಡ್


7) ಪಶ್ಚಿಮ ಘಟ್ಟಗಳಲ್ಲಿ ಅತಿ ಎತ್ತರದ ಶಿಖರ ಯಾವುದು?

ಉ. ಅನೈಮುಡಿ


8) ಭಾರತದ ಮೊದಲ ರಾಷ್ಟ್ರೀಯ ಉದ್ಯಾನವನ ಯಾವುದು?

ಉ. ಜಿಮ್ ಕಾರ್ಬೆಟ್


9) ಜಗತ್ತಿನ ಏಕೈಕ ತೇಲುವ ಉದ್ಯಾನವನ ಯಾವುದು? 

ಉ. ಕಿಬುಲ್ ಲಮ್ ಜಿಯೋ ರಾಷ್ಟ್ರೀಯ ಉದ್ಯಾನವನ


10) ಭಾರತದಲ್ಲಿ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ರಾಜ್ಯ ಯಾವುದು?

ಉ. ಮಧ್ಯಪ್ರದೇಶ



Current affairs - 10


1) ಇತ್ತೀಚಿಗೆ ಫೋರ್ಸ್ ವರದಿಯ ಪ್ರಕಾರ ವಿಶ್ವದ ಅತಿ ಹೆಚ್ಚು ಶತಕೋಟ್ಯಾಧಿಪತಿಗಳು ಪಟ್ಟಿಯಲ್ಲಿ ಭಾರತಕ್ಕೆ ಯಾವ ಸ್ಥಾನ ಸಿಕ್ಕಿದೆ?

ಉ. ಮೂರನೇ ಸ್ಥಾನ

       1- ಅಮೆರಿಕ

       2- ಚೀನಾ


2) ಯಾವ ಭಾರತೀಯ ಮಹಿಳಾ ನಾವಿಕ ಒಲಿಂಪಿಕ್ಸ್ ಗೆ ಅರ್ಹತೆ ಪಡೆದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ?

ಉ. ನೇತ್ರ ಕುಮ್ಮನ್


3) ಹಣಕಾಸು ಸೇರ್ಪಡೆ ಸೂಚ್ಯಂಕವನ್ನು ಪ್ರಕಟಿಸಲು ಯಾವ ಸಂಸ್ಥೆ ನಿರ್ಧರಿಸಿದೆ?

ಉ. R B I


4) ಇತ್ತೀಚಿಗೆ ನಿಧನರಾದ ಭಾರತದ ಮೊದಲ ಕ್ರಿಕೆಟ್ ನಿರೂಪಕಿ ಯಾರು?

ಉ. ಚಂದ್ರ ನಾಯ್ಡು


5) ವಿವೋ ಬ್ರಾಂಡ್ ಅಂಬಾಸಿಡರ್ ಆಗಿ ಯಾರನ್ನು ನೇಮಿಸಲಾಗಿದೆ?

ಉ. ವಿರಾಟ್ ಕೋಹ್ಲಿ


6) ವಿಶ್ವದ ಅತಿ ಎತ್ತರದ ರೈಲ್ವೆ ಕಮಾನು ಸೇತುವೆ ಇಲ್ಲಿ ಪ್ರಾರಂಭಗೊಂಡಿದೆ?

ಉ. ಜಮ್ಮು ಕಾಶ್ಮೀರ

        - ಚಿನಾಬ್ ನದಿ ಮೇಲೆ


7) ಇತ್ತೀಚೆಗೆ WIPRO MD ಯಾಗಿ ನೇಮಕಗೊಂಡವರು ಯಾರು?

ಉ. ಸಾರಾ ಆಡಮ್ ಗೇಜ್


8) ಇತ್ತೀಚಿಗೆ ತಾಳೆ ಎಣ್ಣೆ ಹಣವನ್ನು ಯಾವ ದೇಶದ ನಿಷೇಧಿಸಿದೆ? 

ಉ. ಶ್ರೀಲಂಕಾ


9) ಭಾರತದ ಅತಿದೊಡ್ಡ ತೇಲುವ ಸೌರ ವಿದ್ಯುತ್ ಸ್ಥಾವರ ವನ್ನು ಯಾವ ಸ್ಥಳದಲ್ಲಿ ಸ್ಥಾಪಿಸಲಾಗುತ್ತಿದೆ? 

ಉ. ರಾಮಗುಂಡಮ್


10) IMF ಪ್ರಕಾರ 2021 22 ಆರ್ಥಿಕ ವರ್ಷದಲ್ಲಿ ಭಾರತದ ನಿರೀಕ್ಷಿತ ಜಿಡಿಪಿ ಬೆಳವಣಿಗೆ ದರ ಎಷ್ಟು? 

ಉ. 12.5%

12 comments: