KSP Civil Police Constable History Notes - 02




ಬೌದ್ಧ ಧರ್ಮದ  ಮಹಾಜನಪದಗಳು

 

  1. ಎರಡನೇ ಜೈನ ಸಮ್ಮೇಳನವು ಕ್ರಿ.. 512 ರಲ್ಲಿ ಎಲ್ಲಿ ನಡೆಯಿತು?

ಉತ್ತರ: ವಲ್ಲಭಿ (ಗುಜರಾತ್)

 

  1. ಜೈನ ಧರ್ಮದ ಪವಿತ್ರ ಗ್ರಂಥಗಳನ್ನು ಏನೆಂದು ಕರೆಯಲಾಗುತ್ತದೆ?

ಉತ್ತರ: ಅಂಗಗಳು ಅಥವಾ ಆಗಮಗಳು

 

  1. ಬೌದ್ಧ ಧರ್ಮದ ಸಂಸ್ಥಾಪಕರು ಯಾರು?

ಉತ್ತರ: ಗೌತಮ ಬುದ್ಧ

 

  1. ಗೌತಮ ಬುದ್ಧನ ಮೂಲ ಹೆಸರೇನಾಗಿತ್ತು?

ಉತ್ತರ: ಸಿದ್ಧಾರ್ಥ

 

  1. ಗೌತಮ ಬುದ್ಧನು ಎಲ್ಲಿ ಜನಿಸಿದನು?

ಉತ್ತರ: ಲುಂಬಿನಿ ವನ (ಕಪಿಲವಸ್ತು ಹತ್ತಿರ, ಪ್ರಸ್ತುತ ನೇಪಾಳ)

 

  1. ಬುದ್ಧನ ತಂದೆ ಶುದ್ಧೋದನ ಯಾವ ಗಣರಾಜ್ಯದ ಮುಖ್ಯಸ್ಥನಾಗಿದ್ದನು?

ಉತ್ತರ: ಶಾಕ್ಯ ಗಣರಾಜ್ಯ

 

  1. ಗೌತಮ ಬುದ್ಧನ ತಾಯಿ ಮತ್ತು ಸಾಕುತಾಯಿಯ ಹೆಸರೇನು?

ಉತ್ತರ: ತಾಯಿ ಮಹಾಮಾಯೆ (ಮಾಯಾದೇವಿ) ಮತ್ತು ಸಾಕುತಾಯಿ ಪ್ರಜಾಪತಿ ಗೌತಮಿ

 

  1. ಬುದ್ಧನ ಪತ್ನಿ ಯಶೋಧರೆ ಮತ್ತು ಮಗನ ಹೆಸರೇನು?

ಉತ್ತರ: ಮಗನ ಹೆಸರು ರಾಹುಲ

 

  1. ಸಿದ್ಧಾರ್ಥನು ತನ್ನ 29ನೇ ವಯಸ್ಸಿನಲ್ಲಿ ಸಂಸಾರವನ್ನು ತ್ಯಜಿಸಿದ ಘಟನೆಯನ್ನು ಬೌದ್ಧ ಗ್ರಂಥಗಳಲ್ಲಿ ಏನೆಂದು ಕರೆಯಲಾಗಿದೆ?

ಉತ್ತರ: ಮಹಾಭಿನಿಷ್ಕ್ರಮಣ

 

  1. ಬುದ್ಧನಿಗೆ ಎಲ್ಲಿ ಮತ್ತು ಯಾವ ನದಿಯ ದಂಡೆಯ ಮೇಲೆ ಜ್ಞಾನೋದಯವಾಯಿತು?

ಉತ್ತರ: ಗಯಾದಲ್ಲಿ (ಬಿಹಾರ), ನಿರಂಜನ ನದಿಯ ದಂಡೆಯ ಮೇಲಿದ್ದ ಬೋಧಿ ವೃಕ್ಷದ (ಅರಳಿ ಮರ) ಕೆಳಗೆ

 

  1. ಜ್ಞಾನೋದಯದ ನಂತರ ಸಿದ್ಧಾರ್ಥನನ್ನು ಏನೆಂದು ಕರೆಯಲಾಯಿತು?

ಉತ್ತರ: ಬುದ್ಧ (ಜ್ಞಾನೋದಯ ಹೊಂದಿದವನು) ಮತ್ತು ಶಾಕ್ಯಮುನಿ

 

  1. ಬುದ್ಧನು ತನ್ನ ಮೊದಲ ಬೋಧನೆಯನ್ನು ಐದು ಜನ ಶಿಷ್ಯರಿಗೆ ಎಲ್ಲಿ ನೀಡಿದನು?

ಉತ್ತರ: ಸಾರನಾಥದ ಜಿಂಕೆ ವನದಲ್ಲಿ (ಋಷಿಪಟ್ಟಣ)

 

  1. ಬುದ್ಧನ ಮೊದಲ ಬೋಧನೆಯ ಘಟನೆಯನ್ನು ಬೌದ್ಧ ಧರ್ಮದಲ್ಲಿ ಏನೆಂದು ಕರೆಯಲಾಗುತ್ತದೆ?

ಉತ್ತರ: ಧರ್ಮಚಕ್ರ ಪ್ರವರ್ತನ

 

  1. ಗೌತಮ ಬುದ್ಧನು ಬೋಧನೆಗಾಗಿ ಬಳಸಿದ ಜನಸಾಮಾನ್ಯರ ಭಾಷೆ ಯಾವುದು?

ಉತ್ತರ: ಪಾಲಿ ಭಾಷೆ

 

  1. ಬುದ್ಧನು ಪ್ರತಿಪಾದಿಸಿದ ನಾಲ್ಕು ಆರ್ಯ ಸತ್ಯಗಳು ಯಾವುವು?

ಉತ್ತರ: ಪ್ರಪಂಚವು ದುಃಖಮಯವಾಗಿದೆ, ಆಸೆಯೇ ದುಃಖಕ್ಕೆ ಮೂಲ ಕಾರಣ, ದುಃಖ ನಿವಾರಣೆ ಸಾಧ್ಯ, ದುಃಖ ನಿವಾರಣೆಗೆ ಅಷ್ಟಾಂಗ ಮಾರ್ಗವೇ ದಾರಿ

 

  1. ಬೌದ್ಧ ಧರ್ಮದ ಅಷ್ಟಾಂಗ ಮಾರ್ಗಗಳು ಯಾವುವು?

ಉತ್ತರ: ಸತ್ಪ್ರೇಕ್ಷೆ, ಸಂಕಲ್ಪ, ವಾಕ್, ಕರ್ಮ, ಜೀವನ, ಶ್ರಮೆ, ಸ್ಮೃತಿ ಮತ್ತು ಸಮಾಧಿ

 

  1. ಬುದ್ಧನು ಮಹಾಪರಿನಿರ್ವಾಣ (ಮರಣ) ಹೊಂದಿದ ಸ್ಥಳ ಯಾವುದು?

ಉತ್ತರ: ಕುಶಿನಗರ (ಉತ್ತರ ಪ್ರದೇಶ)

 

  1. ಬೌದ್ಧ ಧರ್ಮದ ತ್ರಿರತ್ನಗಳು ಯಾವುವು?

ಉತ್ತರ: ಬುದ್ಧ, ಧರ್ಮ ಮತ್ತು ಸಂಘ

 

  1. ಬೌದ್ಧ ಧರ್ಮದ ಪವಿತ್ರ ಗ್ರಂಥಗಳು ಯಾವುವು?

ಉತ್ತರ: ತ್ರಿಪಿಟಕಗಳು (ವಿನಯ ಪಿಟಕ, ಸುತ್ತ ಪಿಟಕ, ಅಭಿಧಮ್ಮ ಪಿಟಕ)

 

  1. ಬುದ್ಧನ ಪೂರ್ವ ಜನ್ಮಗಳ ಕಥೆಗಳನ್ನು ಏನೆಂದು ಕರೆಯಲಾಗುತ್ತದೆ?

ಉತ್ತರ: ಜಾತಕ ಕಥೆಗಳು

 

  1. ಮೊದಲ ಬೌದ್ಧ ಸಮ್ಮೇಳನವು ಎಲ್ಲಿ ಮತ್ತು ಯಾರ ಆಶ್ರಯದಲ್ಲಿ ನಡೆಯಿತು?

ಉತ್ತರ: ರಾಜಗೃಹದಲ್ಲಿ, ಅಜಾತಶತ್ರುವಿನ ಆಶ್ರಯದಲ್ಲಿ (ಅಧ್ಯಕ್ಷತೆ: ಮಹಾಕಶ್ಯಪ)

 

  1. ಎರಡನೇ ಬೌದ್ಧ ಸಮ್ಮೇಳನವು ಕ್ರಿ.ಪೂ. 383 ರಲ್ಲಿ ಎಲ್ಲಿ ಮತ್ತು ಯಾರ ಕಾಲದಲ್ಲಿ ನಡೆಯಿತು?

ಉತ್ತರ: ವೈಶಾಲಿಯಲ್ಲಿ, ಕಾಲಾಶೋಕನ ಆಶ್ರಯದಲ್ಲಿ (ಅಧ್ಯಕ್ಷತೆ: ಸಬಕಾಮಿ)

 

  1. ಮೂರನೇ ಬೌದ್ಧ ಸಮ್ಮೇಳನವು ಯಾರ ಆಶ್ರಯದಲ್ಲಿ ಮತ್ತು ಎಲ್ಲಿ ನಡೆಯಿತು?

ಉತ್ತರ: ಸಾಮ್ರಾಟ್ ಅಶೋಕನ ಆಶ್ರಯದಲ್ಲಿ, ಪಾಟಲಿಪುತ್ರದಲ್ಲಿ (ಅಧ್ಯಕ್ಷತೆ: ಮೊಗ್ಗಲಿಪುತ್ತ ತಿಸ್ಸ)

 

  1. ನಾಲ್ಕನೇ ಬೌದ್ಧ ಸಮ್ಮೇಳನವು ಎಲ್ಲಿ ಮತ್ತು ಯಾರ ಕಾಲದಲ್ಲಿ ನಡೆಯಿತು?

ಉತ್ತರ: ಕಾಶ್ಮೀರದ ಕುಂದಲವನದಲ್ಲಿ, ಕನಿಷ್ಕನ ಆಶ್ರಯದಲ್ಲಿ (ಅಧ್ಯಕ್ಷತೆ: ವಸುಮಿತ್ರ)

 

  1. ಬೌದ್ಧ ಧರ್ಮವು ಹಿನಾಯಾನ ಮತ್ತು ಮಹಾಯಾನ ಎಂಬ ಎರಡು ಪಂಥಗಳಾಗಿ ಯಾವ ಸಮ್ಮೇಳನದಲ್ಲಿ ವಿಭಜನೆಯಾಯಿತು?

ಉತ್ತರ: ನಾಲ್ಕನೇ ಬೌದ್ಧ ಸಮ್ಮೇಳನದಲ್ಲಿ

 

  1. ಬುದ್ಧನ ವಿಗ್ರಹಗಳನ್ನು ಆರಾಧಿಸುವ ಬೌದ್ಧ ಧರ್ಮದ ಪಂಥ ಯಾವುದು?

ಉತ್ತರ: ಮಹಾಯಾನ ಪಂಥ

 

  1. 'ಲೈಟ್ ಆಫ್ ಏಷ್ಯಾ' (ಏಷ್ಯಾದ ಬೆಳಕು) ಎಂದು ಯಾರನ್ನು ಕರೆಯಲಾಗುತ್ತದೆ?

ಉತ್ತರ: ಗೌತಮ ಬುದ್ಧ

 

  1. ಬುದ್ಧಚರಿತ ಎಂಬ ಪ್ರಸಿದ್ಧ ಕಾವ್ಯವನ್ನು ಸಂಸ್ಕೃತದಲ್ಲಿ ಬರೆದವರು ಯಾರು?

ಉತ್ತರ: ಅಶ್ವಘೋಷ

 

  1. ಬೌದ್ಧ ಭಿಕ್ಷುಗಳ ವಾಸಸ್ಥಳಗಳನ್ನು ಏನೆಂದು ಕರೆಯಲಾಗುತ್ತದೆ?

ಉತ್ತರ: ವಿಹಾರಗಳು

 

  1. ಬೌದ್ಧರ ಪ್ರಾರ್ಥನಾ ಮಂದಿರಗಳನ್ನು ಏನೆಂದು ಕರೆಯಲಾಗುತ್ತದೆ?

ಉತ್ತರ: ಚೈತ್ಯಗಳು

 

  1. ಬುದ್ಧನ ಅವಶೇಷಗಳ ಮೇಲೆ ನಿರ್ಮಿಸಲಾದ ಅರ್ಧಗೋಳಾಕಾರದ ಸ್ಮಾರಕಗಳನ್ನು ಏನೆಂದು ಕರೆಯುತ್ತಾರೆ?

ಉತ್ತರ: ಸ್ತೂಪಗಳು

 

  1. ಭಾರತದ ಅತಿ ದೊಡ್ಡ ಸ್ತೂಪ ಯಾವುದು?

ಉತ್ತರ: ಮಧ್ಯಪ್ರದೇಶದ ಸಾಂಚಿ ಸ್ತೂಪ (ಇದನ್ನು ನಿರ್ಮಿಸಿದವನು ಅಶೋಕ)

 

  1. ಕ್ರಿ.ಪೂ. 6ನೇ ಶತಮಾನದಲ್ಲಿ ಉತ್ತರ ಭಾರತದಲ್ಲಿದ್ದ ಒಟ್ಟು ಮಹಾಜನಪದಗಳ ಸಂಖ್ಯೆ ಎಷ್ಟು?

ಉತ್ತರ: 16 ಮಹಾಜನಪದಗಳು

 

  1. ಮಹಾಜನಪದಗಳ ಉಲ್ಲೇಖವಿರುವ ಪ್ರಮುಖ ಬೌದ್ಧ ಗ್ರಂಥ ಯಾವುದು?

ಉತ್ತರ: ಅಂಗುತ್ತರ ನಿಕಾಯ

 

  1. ಮಹಾಜನಪದಗಳ ಪೈಕಿ ದಕ್ಷಿಣ ಭಾರತದಲ್ಲಿದ್ದ ಏಕೈಕ ಮಹಾಜನಪದ ಯಾವುದು?

ಉತ್ತರ: ಅಸ್ಮಕ (ಗೋದಾವರಿ ನದಿ ತೀರದಲ್ಲಿದೆ)

 

  1. ಮಗಧ ಮಹಾಜನಪದದ ಮೊದಲ ರಾಜಧಾನಿ ಯಾವುದಾಗಿತ್ತು?

ಉತ್ತರ: ಗಿರಿವ್ರಜ ಅಥವಾ ರಾಜಗೃಹ

 

  1. 16 ಮಹಾಜನಪದಗಳಲ್ಲಿ ಅತ್ಯಂತ ಶಕ್ತಿಶಾಲಿಯಾಗಿ ಹೊರಹೊಮ್ಮಿದ ಸಾಮ್ರಾಜ್ಯ ಯಾವುದು?

ಉತ್ತರ: ಮಗಧ ಸಾಮ್ರಾಜ್ಯ

 

  1. ಮಗಧವನ್ನು ಆಳಿದ ಮೊದಲ ಪ್ರಮುಖ ರಾಜವಂಶ ಯಾವುದು?

ಉತ್ತರ: ಹರ್ಯಂಕ ವಂಶ

 

  1. ಹರ್ಯಂಕ ವಂಶದ ಸ್ಥಾಪಕ ಯಾರು?

ಉತ್ತರ: ಬಿಂಬಿಸಾರ

 

  1. ಬಿಂಬಿಸಾರನ ಆಸ್ಥಾನದಲ್ಲಿದ್ದ ಪ್ರಸಿದ್ಧ ವೈದ್ಯ ಯಾರು?

ಉತ್ತರ: ಜೀವಕ

 

  1. ಬಿಂಬಿಸಾರನನ್ನು ಕೊಂದು ಮಗಧದ ಸಿಂಹಾಸನ ಏರಿದ ಅವನ ಮಗ ಯಾರು?

ಉತ್ತರ: ಅಜಾತಶತ್ರು (ಕುಣಿಕ)

 

  1. ಪಾಟಲಿಪುತ್ರ (ಪ್ರಸ್ತುತ ಪಾಟ್ನಾ) ನಗರವನ್ನು ಸ್ಥಾಪಿಸಿದ ಮಗಧದ ದೊರೆ ಯಾರು?

ಉತ್ತರ: ಉದಯಿನ್ (ಅಜಾತಶತ್ರುವಿನ ಮಗ)

 

  1. ಹರ್ಯಂಕ ವಂಶದ ನಂತರ ಮಗಧವನ್ನು ಆಳಿದ ವಂಶ ಯಾವುದು?

ಉತ್ತರ: ಶಿಶುನಾಗ ವಂಶ

 

  1. ಶಿಶುನಾಗ ವಂಶದ ಪ್ರಸಿದ್ಧ ದೊರೆ ಯಾರು?

ಉತ್ತರ: ಕಾಲಾಶೋಕ (ಕಾಕವರ್ಣ)

 

  1. ಮಗಧದಲ್ಲಿ ಶಿಶುನಾಗ ವಂಶದ ನಂತರ ಅಧಿಕಾರಕ್ಕೆ ಬಂದ ರಾಜವಂಶ ಯಾವುದು?

ಉತ್ತರ: ನಂದ ವಂಶ

 

  1. ನಂದ ವಂಶದ ಸ್ಥಾಪಕ ಯಾರು?

ಉತ್ತರ: ಮಹಾಪದ್ಮನಂದ (ಭಾರತದ ಮೊದಲ ಸಾಮ್ರಾಜ್ಯ ನಿರ್ಮಾಪಕ ಎಂದು ಕರೆಯಲಾಗುತ್ತದೆ)

 

  1. ನಂದ ವಂಶದ ಕೊನೆಯ ದೊರೆ ಯಾರು?

ಉತ್ತರ: ಧನನಂದ

 

  1. ಧನನಂದನ ಆಳ್ವಿಕೆಯ ಕಾಲದಲ್ಲಿ ಭಾರತದ ಮೇಲೆ ಆಕ್ರಮಣ ಮಾಡಿದ ಮ್ಯಾಸಿಡೋನಿಯಾದ ರಾಜ ಯಾರು?

ಉತ್ತರ: ಅಲೆಕ್ಸಾಂಡರ್ (ಕ್ರಿ.ಪೂ. 326 ರಲ್ಲಿ)

 

  1. ಅಲೆಕ್ಸಾಂಡರ್ ಮತ್ತು ಪೋರಸ್ ರಾಜನ ನಡುವೆ ನಡೆದ ಪ್ರಸಿದ್ಧ ಕದನ ಯಾವುದು?

ಉತ್ತರ: ಹೈಡಾಸ್ಪಾಸ್ ಕದನ (ಝೇಲಂ ನದಿಯ ದಂಡೆಯ ಮೇಲೆ)

 

  1. ಅಲೆಕ್ಸಾಂಡರ್ ಪ್ರೀತಿಯ ಕುದುರೆಯ ಹೆಸರೇನಾಗಿತ್ತು?

ಉತ್ತರ: ಬ್ಯೂಸಿಫಾಲಸ್

 

ಮೌರ್ಯ ಸಾಮ್ರಾಜ್ಯ ಮತ್ತು ಸಾಹಿತ್ಯ

                                                                                   

  1. ಭಾರತದ ಮೊದಲ ಐತಿಹಾಸಿಕ ಸಾಮ್ರಾಜ್ಯ ಯಾವುದು?

ಉತ್ತರ: ಮೌರ್ಯ ಸಾಮ್ರಾಜ್ಯ

 

  1. ಮೌರ್ಯ ಸಾಮ್ರಾಜ್ಯದ ಸ್ಥಾಪಕ ಯಾರು?

ಉತ್ತರ: ಚಂದ್ರಗುಪ್ತ ಮೌರ್ಯ

 

  1. ಚಂದ್ರಗುಪ್ತ ಮೌರ್ಯನು ಯಾರ ಸಹಾಯದಿಂದ ಧನನಂದನನ್ನು ಸೋಲಿಸಿ ಅಧಿಕಾರಕ್ಕೆ ಬಂದನು?

ಉತ್ತರ: ಚಾಣಕ್ಯ (ಕೌಟಿಲ್ಯ / ವಿಷ್ಣುಗುಪ್ತ)

 

  1. ಚಾಣಕ್ಯನು ರಚಿಸಿದ ರಾಜಕೀಯ ಶಾಸ್ತ್ರದ ಪ್ರಸಿದ್ಧ ಗ್ರಂಥ ಯಾವುದು?

ಉತ್ತರ: ಅರ್ಥಶಾಸ್ತ್ರ

 

  1. ಚಂದ್ರಗುಪ್ತ ಮೌರ್ಯನ ಆಸ್ಥಾನಕ್ಕೆ ಭೇಟಿ ನೀಡಿದ ಗ್ರೀಕ್ ರಾಯಭಾರಿ ಯಾರು?

ಉತ್ತರ: ಮೆಗಾಸ್ತನೀಸ್

 

  1. ಮೆಗಾಸ್ತನೀಸ್ ಬರೆದ ಪ್ರಸಿದ್ಧ ಕೃತಿ ಯಾವುದು?

ಉತ್ತರ: ಇಂಡಿಕಾ

 

  1. ಚಂದ್ರಗುಪ್ತ ಮೌರ್ಯನು ಗ್ರೀಕ್ ರಾಜ ಸೆಲ್ಯೂಕಸ್ ನಿಕೇಟರ್ನನ್ನು ಸೋಲಿಸಿದ ವರ್ಷ ಯಾವುದು?

ಉತ್ತರ: ಕ್ರಿ.ಪೂ. 305

 

  1. ಚಂದ್ರಗುಪ್ತ ಮೌರ್ಯನು ತನ್ನ ಕೊನೆಯ ದಿನಗಳಲ್ಲಿ ಯಾವ ಧರ್ಮವನ್ನು ಸ್ವೀಕರಿಸಿದನು?

ಉತ್ತರ: ಜೈನ ಧರ್ಮ

 

  1. ಚಂದ್ರಗುಪ್ತ ಮೌರ್ಯನು ಜೈನ ಮುನಿ ಭದ್ರಬಾಹುವಿನ ಜೊತೆ ಕರ್ನಾಟಕದ ಯಾವ ಸ್ಥಳಕ್ಕೆ ಬಂದು ಸಲ್ಲೇಖನ ವ್ರತ ಕೈಗೊಂಡು ಪ್ರಾಣ ತ್ಯಜಿಸಿದನು?

ಉತ್ತರ: ಶ್ರವಣಬೆಳಗೊಳದ ಚಂದ್ರಗಿರಿ ಬೆಟ್ಟ (ಹಾಸನ ಜಿಲ್ಲೆ)

 

  1. ಚಂದ್ರಗುಪ್ತ ಮೌರ್ಯನ ನಂತರ ಮೌರ್ಯ ಸಾಮ್ರಾಜ್ಯದ ಸಿಂಹಾಸನ ಏರಿದ ಅವನ ಮಗ ಯಾರು?

ಉತ್ತರ: ಬಿಂದುಸಾರ

 

  1. ಗ್ರೀಕರು ಬಿಂದುಸಾರನನ್ನು ಏನೆಂದು ಕರೆದಿದ್ದಾರೆ?

ಉತ್ತರ: ಅಮಿತ್ರಘಾತ (ಶತ್ರು ಸಂಹಾರಕ)

 

  1. ಬಿಂದುಸಾರನ ನಂತರ ಮೌರ್ಯ ಸಾಮ್ರಾಜ್ಯದ ಅತ್ಯಂತ ಪ್ರಸಿದ್ಧ ದೊರೆಯಾಗಿ ಯಾರು ಅಧಿಕಾರಕ್ಕೆ ಬಂದರು?

ಉತ್ತರ: ಸಾಮ್ರಾಟ್ ಅಶೋಕ (ಕ್ರಿ.ಪೂ. 273 - 232)

 

  1. ಅಶೋಕನ ಜೀವನವನ್ನೇ ಬದಲಾಯಿಸಿದ ಪ್ರಸಿದ್ಧ ಯುದ್ಧ ಯಾವುದು?

ಉತ್ತರ: ಕಳಿಂಗ ಯುದ್ಧ (ಕ್ರಿ.ಪೂ. 261 ರಲ್ಲಿ)

 

  1. ಕಳಿಂಗ ಯುದ್ಧದ ಭೀಕರತೆಯನ್ನು ವಿವರಿಸುವ ಅಶೋಕನ ಶಾಸನ ಯಾವುದು?

ಉತ್ತರ: 13ನೇ ಬಂಡೆಗಲ್ಲು ಶಾಸನ

 

  1. ಕಳಿಂಗ ಯುದ್ಧದ ನಂತರ ಅಶೋಕನು ಯಾವ ಬೌದ್ಧ ಮುನಿಯ ಪ್ರಭಾವದಿಂದ ಬೌದ್ಧ ಧರ್ಮಕ್ಕೆ ದೀಕ್ಷೆ ಪಡೆದನು?

ಉತ್ತರ: ಉಪಗುಪ್ತ

 

  1. ಯುದ್ಧ ಘೋಷಣೆಯನ್ನು (ಭೇರಿಘೋಷ) ಬಿಟ್ಟು ಧರ್ಮ ಘೋಷಣೆಯನ್ನು (ಧಮ್ಮಘೋಷ) ಸ್ವೀಕರಿಸಿದ ಜಗತ್ತಿನ ಮೊದಲ ರಾಜ ಯಾರು?

ಉತ್ತರ: ಸಾಮ್ರಾಟ್ ಅಶೋಕ

 

  1. ಅಶೋಕನು ಬೌದ್ಧ ಧರ್ಮದ ಪ್ರಚಾರಕ್ಕಾಗಿ ತನ್ನ ಮಗ ಮತ್ತು ಮಗಳನ್ನು ಶ್ರೀಲಂಕಾಕ್ಕೆ ಕಳುಹಿಸಿದನು, ಅವರ ಹೆಸರೇನು?

ಉತ್ತರ: ಮಗ ಮಹೇಂದ್ರ ಮತ್ತು ಮಗಳು ಸಂಘಮಿತ್ರೆ

 

  1. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಶಾಸನಗಳನ್ನು ಕೆತ್ತಿಸಿದ ರಾಜ ಯಾರು?

ಉತ್ತರ: ಸಾಮ್ರಾಟ್ ಅಶೋಕ (ಶಾಸನಗಳ ಪಿತಾಮಹ)

 

  1. ಅಶೋಕನ ಶಾಸನಗಳು ಸಾಮಾನ್ಯವಾಗಿ ಯಾವ ಲಿಪಿ ಮತ್ತು ಭಾಷೆಯಲ್ಲಿದ್ದವು?

ಉತ್ತರ: ಬ್ರಾಹ್ಮಿ ಲಿಪಿ ಮತ್ತು ಪ್ರಾಕೃತ ಭಾಷೆ

 

  1. ಅಶೋಕನ ಶಾಸನಗಳನ್ನು ಮೊದಲ ಬಾರಿಗೆ ಓದುವಲ್ಲಿ ಯಶಸ್ವಿಯಾದ ಬ್ರಿಟಿಷ್ ವಿದ್ವಾಂಸ ಯಾರು?

ಉತ್ತರ: ಜೇಮ್ಸ್ ಪ್ರಿನ್ಸೆಪ್ (1837 ರಲ್ಲಿ)

 

  1. 'ದೇವನಾಂಪಿಯ ಪಿಯದಸ್ಸಿ' ಎಂಬ ಬಿರುದು ಯಾರಿಗೆ ಸೇರಿತ್ತು?

ಉತ್ತರ: ಸಾಮ್ರಾಟ್ ಅಶೋಕ

 

  1. ಅಶೋಕನನ್ನು 'ದೇವನಾಂಪಿಯ ಅಶೋಕ' ಎಂದು ಹೆಸರಿಸಿರುವ ಕರ್ನಾಟಕದ ಪ್ರಸಿದ್ಧ ಶಾಸನ ಯಾವುದು?

ಉತ್ತರ: ಮಸ್ಕಿ ಶಾಸನ (ರಾಯಚೂರು ಜಿಲ್ಲೆ) ಮತ್ತು ನಿಟ್ಟೂರು, ಉಡಗೊಲಂ ಶಾಸನಗಳು (ಬಳ್ಳಾರಿ ಜಿಲ್ಲೆ)

 

  1. ಭಾರತ ಸರ್ಕಾರದ ಅಧಿಕೃತ ಲಾಂಛನವಾದ ನಾಲ್ಕು ಮುಖದ ಸಿಂಹದ ಬೋಧಿಗೆಯನ್ನು ಅಶೋಕನ ಯಾವ ಸ್ತೂಪದಿಂದ ಆಯ್ದುಕೊಳ್ಳಲಾಗಿದೆ?

ಉತ್ತರ: ಸಾರನಾಥದ ಸಿಂಹ ಸ್ತೂಪ

 

  1. ಮೌರ್ಯ ಸಾಮ್ರಾಜ್ಯದ ಕೊನೆಯ ದೊರೆ ಯಾರು?

ಉತ್ತರ: ಬೃಹದ್ರಥ

 

  1. ಮೌರ್ಯರ ಕೊನೆಯ ದೊರೆ ಬೃಹದ್ರಥನನ್ನು ಕೊಂದು ಶುಂಗ ವಂಶವನ್ನು ಸ್ಥಾಪಿಸಿದ ಸೇನಾಪತಿ ಯಾರು?

ಉತ್ತರ: ಪುಷ್ಯಮಿತ್ರ ಶುಂಗ

 

  1. ಪುಷ್ಯಮಿತ್ರ ಶುಂಗನ ಆಸ್ಥಾನದಲ್ಲಿದ್ದ ಮತ್ತು 'ಮಹಾಭಾಷ್ಯ' ಗ್ರಂಥವನ್ನು ಬರೆದ ಪ್ರಸಿದ್ಧ ವ್ಯಾಕರಣಕಾರ ಯಾರು?

ಉತ್ತರ: ಪತಂಜಲಿ ಮುನಿ

 

  1. ಶುಂಗ ವಂಶದ ನಂತರ ಮಗಧವನ್ನು ಆಳಿದ ಬ್ರಾಹ್ಮಣ ರಾಜವಂಶ ಯಾವುದು?

ಉತ್ತರ: ಕಣ್ವ ವಂಶ (ಸ್ಥಾಪಕ: ವಾಸುದೇವ ಕಣ್ವ)

 

  1. ದಕ್ಷಿಣ ಭಾರತ ಮತ್ತು ದಕ್ಕನ್ ಪ್ರಾಂತ್ಯದಲ್ಲಿ ಮೌರ್ಯರ ನಂತರ ಅಧಿಕಾರಕ್ಕೆ ಬಂದ ಪ್ರಮುಖ ರಾಜವಂಶ ಯಾವುದು?

ಉತ್ತರ: ಶಾತವಾಹನರು

 

  1. ಶಾತವಾಹನ ವಂಶದ ಸ್ಥಾಪಕ ಯಾರು?

ಉತ್ತರ: ಸಿಮುಖ

 

  1. ಶಾತವಾಹನರ ರಾಜಧಾನಿ ಯಾವುದಾಗಿತ್ತು?

ಉತ್ತರ: ಪ್ರತಿಷ್ಠಾನ ಅಥವಾ ಪೈಥಾನ್ (ಮಹಾರಾಷ್ಟ್ರ)

 

  1. ಶಾತವಾಹನರ ಅಧಿಕೃತ ಭಾಷೆ ಯಾವುದಾಗಿತ್ತು?

ಉತ್ತರ: ಪ್ರಾಕೃತ

 

  1. 'ಗಾಥಾಸಪ್ತಶತಿ' ಎಂಬ ಪ್ರಾಕೃತ ಕಾವ್ಯವನ್ನು ಬರೆದ ಶಾತವಾಹನ ರಾಜ ಯಾರು?

ಉತ್ತರ: ಹಾಲ (ಇವನಿಗೆ ಕವಿವತ್ಸಲ ಎಂಬ ಬಿರುದಿತ್ತು)

 

  1. ಶಾತವಾಹನ ವಂಶದ ಅತ್ಯಂತ ಶ್ರೇಷ್ಠ ದೊರೆ ಯಾರು?

ಉತ್ತರ: ಗೌತಮಿಪುತ್ರ ಶಾತಕರ್ಣಿ

 

  1. ಗೌತಮಿಪುತ್ರ ಶಾತಕರ್ಣಿಯ ಸಾಧನೆಗಳನ್ನು ವಿವರಿಸುವ ಅವನ ತಾಯಿ ಕೆತ್ತಿಸಿದ ಶಾಸನ ಯಾವುದು?

ಉತ್ತರ: ನಾಸಿಕ್ ಶಾಸನ (ಗೌತಮಿ ಬಾಲಶ್ರೀ ಕೆತ್ತಿಸಿದ್ದು)

 

  1. 'ತ್ರಿಸಮುದ್ರತೋಯ ಪೀತವಾಹನ' ಎಂಬ ಬಿರುದು ಯಾರಿಗೆ ಇತ್ತು?

ಉತ್ತರ: ಗೌತಮಿಪುತ್ರ ಶಾತಕರ್ಣಿ

 

  1. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಬ್ರಾಹ್ಮಣರಿಗೆ ಮತ್ತು ಬೌದ್ಧ ಭಿಕ್ಷುಗಳಿಗೆ ಭೂದಾನ (ಭೂಮಿ ದಾನ) ನೀಡುವ ಪದ್ಧತಿಯನ್ನು ಆರಂಭಿಸಿದವರು ಯಾರು?

ಉತ್ತರ: ಶಾತವಾಹನರು

 

  1. ಶಾತವಾಹನರ ಕಾಲದ ಪ್ರಸಿದ್ಧ ಚೈತ್ಯಾಲಯ ಎಲ್ಲಿದೆ?

ಉತ್ತರ: ಕಾರ್ಲೆ ಚೈತ್ಯಾಲಯ (ಮಹಾರಾಷ್ಟ್ರ)

 

  1. ಶಾತವಾಹನರ ಕೊನೆಯ ದೊರೆ ಯಾರು?

ಉತ್ತರ: ಮೂರನೇ ಪುಲೋಮಾಮಿ

 

  1. ವಾಯುವ್ಯ ಭಾರತದಲ್ಲಿ ಮೌರ್ಯರ ನಂತರ ಆಳ್ವಿಕೆ ನಡೆಸಿದ ಅತ್ಯಂತ ಪ್ರಮುಖ ವಿದೇಶಿ ರಾಜವಂಶ ಯಾವುದು?

ಉತ್ತರ: ಕುಶಾನರು

 

  1. ಕುಶಾನ ವಂಶದ ಮೂಲ ಪುರುಷ ಅಥವಾ ಸ್ಥಾಪಕ ಯಾರು?

ಉತ್ತರ: ಕುಜುಲ ಕ್ಯಾಡ್ಫಿಸಿಸ್

 

  1. ಕುಶಾನ ವಂಶದ ಅತ್ಯಂತ ಪ್ರಸಿದ್ಧ ಹಾಗೂ ಶ್ರೇಷ್ಠ ದೊರೆ ಯಾರು?

ಉತ್ತರ: ಕನಿಷ್ಕ

 

  1. ಕನಿಷ್ಕನು ಭಾರತದ ಅಧಿಕೃತ ಕ್ಯಾಲೆಂಡರ್ ಆದ 'ಶಕ ಯುಗ'ವನ್ನು (Saka Era) ಯಾವ ವರ್ಷದಲ್ಲಿ ಆರಂಭಿಸಿದನು?

ಉತ್ತರ: ಕ್ರಿ.. 78 ರಲ್ಲಿ (ಇವನ ಪಟ್ಟಾಭಿಷೇಕದ ವರ್ಷ)

 

  1. ಕನಿಷ್ಕನ ರಾಜಧಾನಿ ಯಾವುದಾಗಿತ್ತು?

ಉತ್ತರ: ಪುರುಷಪುರ (ಪ್ರಸ್ತುತ ಪೆಶಾವರ್, ಪಾಕಿಸ್ತಾನ) ಮತ್ತು ಮಥುರಾ

 

  1. ಕನಿಷ್ಕನ ಆಸ್ಥಾನದಲ್ಲಿದ್ದ ಜಗತ್ಪ್ರಸಿದ್ಧ ಆಯುರ್ವೇದ ಪಂಡಿತ ಹಾಗೂ ವೈದ್ಯ ಯಾರು?

ಉತ್ತರ: ಚರಕ (ಚರಕ ಸಂಹಿತೆಯ ಕರ್ತೃ)

 

  1. 'ಭಾರತದ ಐನ್ಸ್ಟೈನ್' ಎಂದು ಕರೆಯಲ್ಪಡುವ ಮತ್ತು ಶೂನ್ಯವಾದವನ್ನು ಮಂಡಿಸಿದ ಕನಿಷ್ಕನ ಆಸ್ಥಾನದ ತತ್ತ್ವಜ್ಞಾನಿ ಯಾರು?

ಉತ್ತರ: ನಾಗಾರ್ಜುನ (ಮಾಧ್ಯಮಿಕ ಸೂತ್ರದ ಕರ್ತೃ)

 

  1. ಗಾಂಧಾರ ಶಿಲ್ಪಕಲೆ ಮತ್ತು ಮಥುರಾ ಶಿಲ್ಪಕಲೆ ಯಾರ ಕಾಲದಲ್ಲಿ ಅತ್ಯಂತ ಉಚ್ಛ್ರಾಯ ಸ್ಥಿತಿ ತಲುಪಿದವು?

ಉತ್ತರ: ಕುಶಾನರ (ಕನಿಷ್ಕನ) ಕಾಲದಲ್ಲಿ

 

  1. ಚೀನಾದ ರೇಷ್ಮೆ ಮಾರ್ಗವನ್ನು (Silk Route) ನಿಯಂತ್ರಿಸಿದ ಮೊದಲ ಭಾರತೀಯ ರಾಜ ಯಾರು?

ಉತ್ತರ: ಕನಿಷ್ಕ

 

  1. ಮುದ್ರಾ ರಾಕ್ಷಸ ಮತ್ತು ದೇವಿಚಂದ್ರಗುಪ್ತಮ್ ಎಂಬ ನಾಟಕಗಳನ್ನು ಬರೆದವರು ಯಾರು?

ಉತ್ತರ: ವಿಶಾಖದತ್ತ

 

  1. ಕಳಿಂಗವನ್ನು ಆಳಿದ ಚೇದಿ ವಂಶದ ಅತ್ಯಂತ ಪ್ರಸಿದ್ಧ ಮತ್ತು ಶ್ರೇಷ್ಠ ದೊರೆ ಯಾರು?

ಉತ್ತರ: ಖಾರವೇಲ

 

  1. ರಾಜ ಖಾರವೇಲನ ಸಾಧನೆಗಳನ್ನು ವಿವರಿಸುವ ಒಡಿಶಾದಲ್ಲಿರುವ ಪ್ರಸಿದ್ಧ ಶಾಸನ ಯಾವುದು?

ಉತ್ತರ: ಹಾಥಿಗುಂಫಾ ಶಾಸನ (ಆನೆಗುಹೆ ಶಾಸನ)

 


No comments:

Post a Comment