ಪ್ರಾಗೈತಿಹಾಸಿಕ ಕಾಲ ಮತ್ತು ಸಿಂಧೂ ಬಯಲಿನ ನಾಗರಿಕತೆ (Prehistoric Period & Indus Valley Civilization)
- ಇತಿಹಾಸದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?
ಉತ್ತರ: ಹೆರೊಡೋಟಸ್
- ಭಾರತೀಯ ಪುರಾತತ್ವ ಶಾಸ್ತ್ರದ ಪಿತಾಮಹ ಯಾರು?
ಉತ್ತರ: ಅಲೆಕ್ಸಾಂಡರ್ ಕನ್ನಿಂಗ್ ಹ್ಯಾಮ್
- ಮಾನವನು ಮೊಟ್ಟಮೊದಲ ಬಾರಿಗೆ ಬಳಸಿದ ಲೋಹ ಯಾವುದು?
ಉತ್ತರ: ತಾಮ್ರ
- ಹರಪ್ಪ ನಾಗರಿಕತೆಯು ಯಾವ ಯುಗಕ್ಕೆ ಸೇರಿದೆ?
ಉತ್ತರ: ಕಂಚಿನ ಯುಗ
- ಸಿಂಧೂ ನಾಗರಿಕತೆಯ ಮೊದಲ ನಿವೇಶನವಾದ 'ಹರಪ್ಪ'ವನ್ನು ಸಂಶೋಧಿಸಿದವರು ಯಾರು?
ಉತ್ತರ: ದಯಾರಾಂ ಸಾಹ್ನಿ (1921 ರಲ್ಲಿ)
- ಮೊಹೆಂಜೋದಾರೋ ಎಂದರೆ ಸಿಂಧಿ ಭಾಷೆಯಲ್ಲಿ ಏನರ್ಥ?
ಉತ್ತರ: ಸತ್ತವರ ದಿಬ್ಬ (Mound of the Dead)
- ಮೊಹೆಂಜೋದಾರೋ ನಿವೇಶನವನ್ನು ಪತ್ತೆಹಚ್ಚಿದ ಪ್ರಸಿದ್ಧ ಇತಿಹಾಸಕಾರ ಯಾರು?
ಉತ್ತರ: ಆರ್. ಡಿ. ಬ್ಯಾನರ್ಜಿ (1922 ರಲ್ಲಿ)
- ಸಿಂಧೂ ನಾಗರಿಕತೆಯ ಅತ್ಯಂತ ದೊಡ್ಡ ಸ್ನಾನಗೃಹ (Great Bath) ಎಲ್ಲಿ ಕಂಡುಬಂದಿದೆ?
ಉತ್ತರ: ಮೊಹೆಂಜೋದಾರೋ
- ಸಿಂಧೂ ಬಯಲಿನ ನಾಗರಿಕತೆಯ ಪ್ರಮುಖ ಬಂದರು ನಗರ ಯಾವುದಾಗಿತ್ತು?
ಉತ್ತರ: ಲೋಥಾಲ್ (ಗುಜರಾತ್)
- ಹರಪ್ಪ ನಾಗರಿಕತೆಯ ಜನರ ಪ್ರಮುಖ ಆರಾಧ್ಯ ದೇವ ಯಾರು?
ಉತ್ತರ: ಪಶುಪತಿ (ಶಿವ) ಮತ್ತು ಮಾತೃದೇವತೆ
- ಸಿಂಧೂ ನಾಗರಿಕತೆಯ ಜನರಿಗೆ ಪರಿಚಯವಿಲ್ಲದ ಪ್ರಮುಖ ಪ್ರಾಣಿ ಯಾವುದು?
ಉತ್ತರ: ಕುದುರೆ
- ಹರಪ್ಪನ್ನರು ಅಳತೆ ಮತ್ತು ತೂಕಕ್ಕಾಗಿ ಯಾವ ಪದ್ಧತಿಯನ್ನು ಬಳಸುತ್ತಿದ್ದರು?
ಉತ್ತರ: ಬೈನರಿ ಪದ್ಧತಿ (16 ರ ಗುಣಕಗಳು)
- ವಿಶ್ವದಲ್ಲೇ ಮೊದಲ ಬಾರಿಗೆ ಹತ್ತಿ (Cotton) ಬೆಳೆದ ಕೀರ್ತಿ ಯಾವ ನಾಗರಿಕತೆಗೆ ಸಲ್ಲುತ್ತದೆ?
ಉತ್ತರ: ಸಿಂಧೂ ನಾಗರಿಕತೆ
- ಸಿಂಧೂ ನಾಗರಿಕತೆಯ ಲಿಪಿಯು ಯಾವ ಶೈಲಿಯಲ್ಲಿದೆ?
ಉತ್ತರ: ಬೌಸ್ಟ್ರೋಫೆಡನ್ (ಚಿತ್ರಲಿಪಿ - ಎಡದಿಂದ ಬಲಕ್ಕೆ, ಬಲದಿಂದ ಎಡಕ್ಕೆ)
- ಹರಪ್ಪನ್ನರು ವ್ಯಾಪಾರಕ್ಕಾಗಿ ಬಳಸುತ್ತಿದ್ದ ಮುದ್ರೆಗಳು (Seals) ಯಾವುದರಿಂದ ಮಾಡಲ್ಪಟ್ಟಿದ್ದವು?
ಉತ್ತರ: ಸ್ಟೀಟೈಟ್ (ಮೃದುವಾದ ಕಲ್ಲು)
- ಸಿಂಧೂ ನಾಗರಿಕತೆಯ 'ಕಾಲಿಬಂಗನ್' ನಿವೇಶನವು ಪ್ರಸ್ತುತ ಯಾವ ರಾಜ್ಯದಲ್ಲಿದೆ?
ಉತ್ತರ: ರಾಜಸ್ಥಾನ
- ಕಾಲಿಬಂಗನ್ ಎಂದರೆ ಅರ್ಥವೇನು?
ಉತ್ತರ: ಕಪ್ಪು ಬಳೆಗಳು
- ಉಳುಮೆ ಮಾಡಿದ ಭೂಮಿಯ ಕುರುಹುಗಳು ಸಿಂಧೂ ನಾಗರಿಕತೆಯ ಯಾವ ನಿವೇಶನದಲ್ಲಿ ದೊರೆತಿವೆ?
ಉತ್ತರ: ಕಾಲಿಬಂಗನ್
- ಹರಪ್ಪ ನಾಗರಿಕತೆಯ ಪ್ರಸಿದ್ಧ 'ನರ್ತಕಿಯ ಕಂಚಿನ ವಿಗ್ರಹ' ಎಲ್ಲಿ ದೊರೆತಿದೆ?
ಉತ್ತರ: ಮೊಹೆಂಜೋದಾರೋ
- ಸಿಂಧೂ ನಾಗರಿಕತೆಯ ಯಾವ ನಿವೇಶನದಲ್ಲಿ ಕೃತಕ ಹಡಗುಕಟ್ಟೆ (Dockyard) ಪತ್ತೆಯಾಗಿದೆ?
ಉತ್ತರ: ಲೋಥಾಲ್
- ಲೋಥಾಲ್ ನಿವೇಶನವು ಯಾವ ನದಿಯ ದಂಡೆಯ ಮೇಲಿದೆ?
ಉತ್ತರ: ಭೋಗಾವೋ ನದಿ
- ಮೂರು ಭಾಗಗಳಾಗಿ ವಿಂಗಡಿಸಲ್ಪಟ್ಟ ಸಿಂಧೂ ನಾಗರಿಕತೆಯ ಏಕೈಕ ನಗರ ಯಾವುದು?
ಉತ್ತರ: ಧೋಲಾವೀರಾ (ಗುಜರಾತ್)
- ಅತ್ಯುತ್ತಮ ನೀರು ನಿರ್ವಹಣಾ ವ್ಯವಸ್ಥೆ (Water Management) ಹೊಂದಿದ್ದ ಹರಪ್ಪನ್ ನಗರ ಯಾವುದು?
ಉತ್ತರ: ಧೋಲಾವೀರಾ
- ಸಿಂಧೂ ನಾಗರಿಕತೆಯ ಜಗತ್ತಿನ ಅತಿ ಹಳೆಯ ಸೈನ್ ಬೋರ್ಡ್ (Signboard) ಎಲ್ಲಿ ಪತ್ತೆಯಾಗಿದೆ?
ಉತ್ತರ: ಧೋಲಾವೀರಾ
- ಕೋಟ್ ಡಿಜಿ ಎಂಬ ಸಿಂಧೂ ನಿವೇಶನವು ಪ್ರಸ್ತುತ ಎಲ್ಲಿದೆ?
ಉತ್ತರ: ಪಾಕಿಸ್ತಾನದ ಸಿಂಧ್ ಪ್ರಾಂತ್ಯ
- ಹರಪ್ಪ ನಾಗರಿಕತೆಯ 'ಚಾನ್ಹುದಾರೋ' ನಿವೇಶನದ ಮುಖ್ಯ ವೈಶಿಷ್ಟ್ಯವೇನು?
ಉತ್ತರ: ಇದು ಕೋಟೆ ಇಲ್ಲದ ಏಕೈಕ ನಗರವಾಗಿತ್ತು
- ಸಿಂಧೂ ನಾಗರಿಕತೆಯ ಪೂರ್ವ ಗಡಿಯಾಗಿದ್ದ ನಿವೇಶನ ಯಾವುದು?
ಉತ್ತರ: ಆಲಂಗೀರ್ ಪುರ (ಉತ್ತರ ಪ್ರದೇಶ)
- ಸಿಂಧೂ ನಾಗರಿಕತೆಯ ಉತ್ತರ ತುತ್ತತುದಿಯ ನಿವೇಶನ ಯಾವುದು?
ಉತ್ತರ: ಮಂಡಾ (ಜಮ್ಮು ಮತ್ತು ಕಾಶ್ಮೀರ)
- ಸಿಂಧೂ ನಾಗರಿಕತೆಯ ದಕ್ಷಿಣದ ತುತ್ತತುದಿಯ ನಿವೇಶನ ಯಾವುದು?
ಉತ್ತರ: ದೈಮಾಬಾದ್ (ಮಹಾರಾಷ್ಟ್ರ)
- ಸಿಂಧೂ ನಾಗರಿಕತೆಯ ಪಶ್ಚಿಮದ ತುತ್ತತುದಿಯ ನಿವೇಶನ ಯಾವುದು?
ಉತ್ತರ: ಸುತ್ಕಾಗೇಂಡರ್ (ಬಲೂಚಿಸ್ತಾನ್)
- ಹರಪ್ಪ ನಾಗರಿಕತೆಯಲ್ಲಿ ಕಂಡುಬಂದ ಪ್ರಮುಖ ಧಾನ್ಯಗಳು ಯಾವುವು?
ಉತ್ತರ: ಗೋಧಿ ಮತ್ತು ಬಾರ್ಲಿ
- ಸಿಂಧೂ ನಾಗರಿಕತೆಯ ಜನರಿಗೆ ಯಾವ ಲೋಹದ ಬಳಕೆ ತಿಳಿದಿರಲಿಲ್ಲ?
ಉತ್ತರ: ಕಬ್ಬಿಣ
- ಕುದುರೆಯ ಅವಶೇಷಗಳು ಪತ್ತೆಯಾದ ಸಿಂಧೂ ನಾಗರಿಕತೆಯ ಏಕೈಕ ನಿವೇಶನ ಯಾವುದು?
ಉತ್ತರ: ಸುರಕೋಟ್ಡಾ (ಗುಜರಾತ್)
- 'ರೋಪಾರ್' ಎಂಬ ಸಿಂಧೂ ನಿವೇಶನವು ಯಾವ ನದಿಯ ದಂಡೆಯ ಮೇಲಿದೆ?
ಉತ್ತರ: ಸಟ್ಲೆಜ್ ನದಿ (ಪಂಜಾಬ್)
- ಹರಪ್ಪನ್ನರು ತವರವನ್ನು (Tin) ಯಾವ ದೇಶದಿಂದ ಆಮದು ಮಾಡಿಕೊಳ್ಳುತ್ತಿದ್ದರು?
ಉತ್ತರ: ಅಫ್ಘಾನಿಸ್ತಾನ ಮತ್ತು ಇರಾನ್
- ಹರಪ್ಪನ್ನರು ಚಿನ್ನವನ್ನು ಎಲ್ಲಿಂದ ಪಡೆದುಕೊಳ್ಳುತ್ತಿದ್ದರು?
ಉತ್ತರ: ಕರ್ನಾಟಕದ ಕೋಲಾರ ಗಣಿಗಳಿಂದ
- ಸಿಂಧೂ ನಾಗರಿಕತೆಯ ನಗರಗಳ ರಸ್ತೆಗಳು ಯಾವ ಮಾದರಿಯಲ್ಲಿದ್ದವು?
ಉತ್ತರ: ಗ್ರಿಡ್ ಮಾದರಿ (ಪರಸ್ಪರ ಲಂಬಕೋನದಲ್ಲಿ ಕತ್ತರಿಸುತ್ತಿದ್ದವು)
- ಹರಪ್ಪ ನಾಗರಿಕತೆಯ ವಿನಾಶಕ್ಕೆ 'ಆರ್ಯರ ಆಕ್ರಮಣವೇ' ಕಾರಣ ಎಂದು ಪ್ರತಿಪಾದಿಸಿದವರು ಯಾರು?
ಉತ್ತರ: ಮಾರ್ಟಿಮರ್ ವೀಲರ್
- ಸಿಂಧೂ ನಾಗರಿಕತೆಯ ಅವಧಿಯನ್ನು ನಿರ್ಧರಿಸಲು ಬಳಸಲಾದ ವೈಜ್ಞಾನಿಕ ವಿಧಾನ ಯಾವುದು?
ಉತ್ತರ: ರೇಡಿಯೋ ಕಾರ್ಬನ್-14 ಡೇಟಿಂಗ್ ವಿಧಾನ
- ಸಿಂಧೂ ನಾಗರಿಕತೆಯ ಮನೆಗಳ ಬಾಗಿಲುಗಳು ಸಾಮಾನ್ಯವಾಗಿ ಎತ್ತ ಮುಖ ಮಾಡುತ್ತಿದ್ದವು?
ಉತ್ತರ: ಮುಖ್ಯ ರಸ್ತೆಯ ಹಿಂಭಾಗದ ಗಲ್ಲಿಗಳಿಗೆ
ವೈದಿಕ ಕಾಲ ಮತ್ತು ಸಾಹಿತ್ಯ (Vedic Period & Literature)
- ವೈದಿಕ ಸಂಸ್ಕೃತಿಯ ನಿರ್ಮಾತೃಗಳು ಯಾರು?
ಉತ್ತರ: ಆರ್ಯರು
- ಆರ್ಯರು ಮೂಲತಃ ಮಧ್ಯ ಏಷ್ಯಾದವರು ಎಂದು ಪ್ರತಿಪಾದಿಸಿದ ಇತಿಹಾಸಕಾರ ಯಾರು?
ಉತ್ತರ: ಮ್ಯಾಕ್ಸ್ ಮುಲ್ಲರ್
- ಆರ್ಯರ ಮೂಲ ವಾಸಸ್ಥಾನ ಆರ್ಕ್ಟಿಕ್ ಪ್ರದೇಶ ಎಂದು ವಾದಿಸಿದ ಭಾರತೀಯ ನಾಯಕ ಯಾರು?
ಉತ್ತರ: ಬಾಲಗಂಗಾಧರ ತಿಲಕ್
- ಆರ್ಯ ಎಂಬ ಪದದ ಶಾಬ್ದಿಕ ಅರ್ಥವೇನು?
ಉತ್ತರ: ಗೌರವಾನ್ವಿತ ಅಥವಾ ಉತ್ತಮ ಕುಲದವನು
- ಭಾರತದ ಅತ್ಯಂತ ಪ್ರಾಚೀನ ಸಾಹಿತ್ಯ ಕೃತಿ ಯಾವುದು?
ಉತ್ತರ: ಋಗ್ವೇದ
- ಋಗ್ವೇದದಲ್ಲಿರುವ ಒಟ್ಟು ಶ್ಲೋಕಗಳ (ಸೂಕ್ತಗಳು) ಸಂಖ್ಯೆ ಎಷ್ಟು?
ಉತ್ತರ: 1028 ಸೂಕ್ತಗಳು
- ಋಗ್ವೇದದಲ್ಲಿರುವ ಒಟ್ಟು ಮಂಡಲಗಳು ಎಷ್ಟು?
ಉತ್ತರ: 10 ಮಂಡಲಗಳು
- ಪ್ರಸಿದ್ಧ 'ಗಾಯತ್ರಿ ಮಂತ್ರ'ವು ಋಗ್ವೇದದ ಎಷ್ಟನೇ ಮಂಡಲದಲ್ಲಿದೆ?
ಉತ್ತರ: 3 ನೇ ಮಂಡಲದಲ್ಲಿ
- ಗಾಯತ್ರಿ ಮಂತ್ರವನ್ನು ರಚಿಸಿದ ಪ್ರಸಿದ್ಧ ಋಷಿ ಯಾರು?
ಉತ್ತರ: ವಿಶ್ವಾಮಿತ್ರ
- ಸಮಾಜದ ನಾಲ್ಕು ವರ್ಣಗಳ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ) ಉಲ್ಲೇಖವಿರುವ ಋಗ್ವೇದದ ಭಾಗ ಯಾವುದು?
ಉತ್ತರ: 10 ನೇ ಮಂಡಲದ 'ಪುರುಷ ಸೂಕ್ತ'
- ಋಗ್ವೇದ ಕಾಲದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟ ನದಿ ಯಾವುದು?
ಉತ್ತರ: ಸರಸ್ವತಿ ನದಿ
- ಋಗ್ವೇದದಲ್ಲಿ ಅತ್ಯಂತ ಹೆಚ್ಚು ಬಾರಿ ಉಲ್ಲೇಖಿಸಲಾದ ನದಿ ಯಾವುದು?
ಉತ್ತರ: ಸಿಂಧೂ ನದಿ
- ಯಾಗ, ಯಜ್ಞ ಮತ್ತು ಹೋಮಗಳ ನಿಯಮಗಳನ್ನು ಒಳಗೊಂಡಿರುವ ವೇದ ಯಾವುದು?
ಉತ್ತರ: ಯಜುರ್ವೇದ
- ಭಾರತೀಯ ಸಂಗೀತದ ಮೂಲ ಎಂದು ಯಾವ ವೇದವನ್ನು ಕರೆಯಲಾಗುತ್ತದೆ?
ಉತ್ತರ: ಸಾಮವೇದ
- ಮಾಟ-ಮಂತ್ರ, ತಂತ್ರ ಹಾಗೂ ಔಷಧೀಯ ಪದ್ಧತಿಗಳನ್ನು ಒಳಗೊಂಡಿರುವ ವೇದ ಯಾವುದು?
ಉತ್ತರ: ಅಥರ್ವಣವೇದ
- ವೇದಗಳ ಕೊನೆಯ ಭಾಗಗಳನ್ನು ಏನೆಂದು ಕರೆಯಲಾಗುತ್ತದೆ?
ಉತ್ತರ: ಉಪನಿಷತ್ತುಗಳು ಅಥವಾ ವೇದಾಂತ
- ಭಾರತದ ರಾಷ್ಟ್ರೀಯ ಲಾಂಛನದಲ್ಲಿರುವ 'ಸತ್ಯಮೇವ ಜಯತೇ' ವಾಕ್ಯವನ್ನು ಯಾವ ಉಪನಿಷತ್ತಿನಿಂದ ಆಯ್ದುಕೊಳ್ಳಲಾಗಿದೆ?
ಉತ್ತರ: ಮುಂಡಕ ಉಪನಿಷತ್
- ಋಗ್ವೇದ ಕಾಲದ ಆರ್ಯರ ಪ್ರಮುಖ ಆರಾಧ್ಯ ದೇವ ಯಾರು?
ಉತ್ತರ: ಇಂದ್ರ (ಪುರಂದರ - ಕೋಟೆಗಳನ್ನು ಧ್ವಂಸಗೊಳಿಸುವವನು)
- ಋಗ್ವೇದ ಕಾಲದ ರಾಜನಿಗೆ ಸಲಹೆ ನೀಡುತ್ತಿದ್ದ ಪ್ರಮುಖ ಸಂಸ್ಥೆಗಳು ಯಾವುವು?
ಉತ್ತರ: ಸಭಾ ಮತ್ತು ಸಮಿತಿ
- ಋಗ್ವೇದ ಕಾಲದಲ್ಲಿ ಸಂಪತ್ತಿನ ಮುಖ್ಯ ಸಂಕೇತ ಯಾವುದಾಗಿತ್ತು?
ಉತ್ತರ: ಹಸುಗಳು (ಗೌ)
- ವೇದಗಳ ಕಾಲದಲ್ಲಿ ಯುದ್ಧಗಳನ್ನು ಏನೆಂದು ಕರೆಯಲಾಗುತ್ತಿತ್ತು?
ಉತ್ತರ: ಗವಿಷ್ಠಿ (ಹಸುಗಳಿಗಾಗಿ ಹುಡುಕಾಟ)
- ಆರ್ಯರ ಸಮಾಜದ ಅತ್ಯಂತ ಚಿಕ್ಕ ಘಟಕ ಯಾವುದಾಗಿತ್ತು?
ಉತ್ತರ: ಕುಲ ಅಥವಾ ಕುಟುಂಬ
- ಕುಟುಂಬದ ಮುಖ್ಯಸ್ಥನನ್ನು ಏನೆಂದು ಕರೆಯುತ್ತಿದ್ದರು?
ಉತ್ತರ: ಕುಲಪತಿ ಅಥವಾ ಗೃಹಪತಿ
- ಋಗ್ವೇದದಲ್ಲಿ ಉಲ್ಲೇಖವಾಗಿರುವ 'ದಶರಾಜ್ಞ ಯುದ್ಧ' (ಹತ್ತು ರಾಜರ ಯುದ್ಧ) ಯಾವ ನದಿಯ ದಂಡೆಯ ಮೇಲೆ ನಡೆಯಿತು?
ಉತ್ತರ: ಪರುಷ್ಣಿ ನದಿ (ಪ್ರಸ್ತುತ ರಾವಿ ನದಿ)
- ದಶರಾಜ್ಞ ಯುದ್ಧದಲ್ಲಿ ಜಯಶಾಲಿಯಾದ ಭರತ ವಂಶದ ರಾಜ ಯಾರು?
ಉತ್ತರ: ಸುದಾಸ
- ವೈದಿಕ ಕಾಲದಲ್ಲಿ ಚಲಾವಣೆಯಲ್ಲಿದ್ದ ಚಿನ್ನದ ನಾಣ್ಯದ ಹೆಸರೇನು?
ಉತ್ತರ: ನಿಷ್ಕ
- ಉತ್ತರ ವೈದಿಕ ಕಾಲದ ಪ್ರಮುಖ ದೇವತೆಗಳು ಯಾರಾಗಿದ್ದರು?
ಉತ್ತರ: ಪ್ರಜಾಪತಿ (ಬ್ರಹ್ಮ), ವಿಷ್ಣು ಮತ್ತು ರುದ್ರ
- ವೇದಾಂಗಗಳ ಒಟ್ಟು ಸಂಖ್ಯೆ ಎಷ್ಟು?
ಉತ್ತರ: 6 (ಶಿಕ್ಷಾ, ಕಲ್ಪ, ವ್ಯಾಕರಣ, ನಿರುಕ್ತ, ಛಂದಸ್ಸು, ಜ್ಯೋತಿಷ್ಯ)
- ಉಪವೇದಗಳ ಸಂಖ್ಯೆ ಎಷ್ಟು?
ಉತ್ತರ: 4 (ಆಯುರ್ವೇದ, ಧನುರ್ವೇದ, ಗಂಧರ್ವವೇದ, ಶಿಲ್ಪವೇದ)
- ಭಾರತದ ಪ್ರಸಿದ್ಧ ಮಹಾಕಾವ್ಯಗಳು ಯಾವುವು?
ಉತ್ತರ: ರಾಮಾಯಣ ಮತ್ತು ಮಹಾಭಾರತ
- ರಾಮಾಯಣವನ್ನು ರಚಿಸಿದವರು ಯಾರು?
ಉತ್ತರ: ವಾಲ್ಮೀಕಿ ಮಹರ್ಷಿ
- ಮಹಾಭಾರತದ ಮೂಲ ಹೆಸರೇನಾಗಿತ್ತು?
ಉತ್ತರ: ಜಯಸಂಹಿತೆ
- ಮಹಾಭಾರತವನ್ನು ರಚಿಸಿದವರು ಯಾರು?
ಉತ್ತರ: ವೇದವ್ಯಾಸ ಮಹರ್ಷಿ
- ಪುರಾಣಗಳ ಒಟ್ಟು ಸಂಖ್ಯೆ ಎಷ್ಟು?
ಉತ್ತರ: 18
- ಅತ್ಯಂತ ಹಳೆಯ ಮತ್ತು ಪ್ರಾಚೀನ ಪುರಾಣ ಯಾವುದು?
ಉತ್ತರ: ಮತ್ಸ್ಯ ಪುರಾಣ
- ಅಷ್ಟಾಧ್ಯಾಯಿ ಎಂಬ ಪ್ರಸಿದ್ಧ ಸಂಸ್ಕೃತ ವ್ಯಾಕರಣ ಗ್ರಂಥವನ್ನು ಬರೆದವರು ಯಾರು?
ಉತ್ತರ: ಪಾಣಿನಿ
- ಯೋಗ ದರ್ಶನವನ್ನು ಪ್ರತಿಪಾದಿಸಿದ ತತ್ತ್ವಜ್ಞಾನಿ ಯಾರು?
ಉತ್ತರ: ಪತಂಜಲಿ ಮಹರ್ಷಿ
- ಸಾಂಖ್ಯ ದರ್ಶನದ ಸ್ಥಾಪಕರು ಯಾರು?
ಉತ್ತರ: ಕಪಿಲ ಮುನಿ
- ನ್ಯಾಯ ದರ್ಶನವನ್ನು ಪ್ರತಿಪಾದಿಸಿದವರು ಯಾರು?
ಉತ್ತರ: ಗೌತಮ ಮಹರ್ಷಿ
- ವೈಶೇಷಿಕ ದರ್ಶನದ ಸ್ಥಾಪಕರು ಯಾರು?
ಉತ್ತರ: ಕಣಾದ ಮಹರ್ಷಿ
ಜೈನ ಧರ್ಮ ಮತ್ತು ಬೌದ್ಧ ಧರ್ಮ (Jainism & Buddhism)
- ಜೈನ ಧರ್ಮದ ಒಟ್ಟು ತೀರ್ಥಂಕರರ ಸಂಖ್ಯೆ ಎಷ್ಟು?
ಉತ್ತರ: 24
- ಜೈನ ಧರ್ಮದ ಮೊದಲ ತೀರ್ಥಂಕರ ಯಾರು?
ಉತ್ತರ: ಋಷಭನಾಥ (ಆದಿನಾಥ)
- ಜೈನ ಧರ್ಮದ 23ನೇ ತೀರ್ಥಂಕರ ಯಾರು?
ಉತ್ತರ: ಪಾರ್ಶ್ವನಾಥ
- ಜೈನ ಧರ್ಮದ 24ನೇ ಹಾಗೂ ಕೊನೆಯ ತೀರ್ಥಂಕರ ಯಾರು?
ಉತ್ತರ: ವರ್ಧಮಾನ ಮಹಾವೀರ
- ವರ್ಧಮಾನ ಮಹಾವೀರನು ಎಲ್ಲಿ ಜನಿಸಿದನು?
ಉತ್ತರ: ಕುಂದಗ್ರಾಮ (ವೈಶಾಲಿ ಹತ್ತಿರ, ಬಿಹಾರ)
- ಮಹಾವೀರನ ತಂದೆ ಮತ್ತು ತಾಯಿಯ ಹೆಸರೇನು?
ಉತ್ತರ: ಸಿದ್ದಾರ್ಥ ಮತ್ತು ತ್ರಿಶಲಾ ದೇವಿ
- ಮಹಾವೀರನ ಪತ್ನಿ ಮತ್ತು ಮಗಳ ಹೆಸರೇನು?
ಉತ್ತರ: ಯಶೋದಾ ಮತ್ತು ಪ್ರಿಯದರ್ಶನಾ (ಅನೋಜಾ)
- ಮಹಾವೀರನಿಗೆ ಜ್ಞಾನೋದಯವಾದ ಸ್ಥಳ ಯಾವುದು?
ಉತ್ತರ: ಜೃಂಭಿಕಾಗ್ರಾಮದ ಹತ್ತಿರದ ಋಜುಪಾಲಿಕಾ ನದಿಯ ದಂಡೆ
- ಜ್ಞಾನೋದಯದ ನಂತರ ಮಹಾವೀರನನ್ನು ಏನೆಂದು ಕರೆಯಲಾಯಿತು?
ಉತ್ತರ: ಕೇವಲಿನ್, ಜಿನ ಅಥವಾ ಮಹಾವೀರ
- ಜಿನ ಎಂದರೆ ಅರ್ಥವೇನು?
ಉತ್ತರ: ಇಂದ್ರಿಯಗಳನ್ನು ಗೆದ್ದವನು
- ಮಹಾವೀರನು ತನ್ನ ಮೊದಲ ಬೋಧನೆಯನ್ನು ಎಲ್ಲಿ ನೀಡಿದನು?
ಉತ್ತರ: ರಾಜಗೃಹದ ವಿಪುಲಾಚಲ ಬೆಟ್ಟದಲ್ಲಿ
- ಮಹಾವೀರನು ಬೋಧನೆಗಾಗಿ ಬಳಸಿದ ಭಾಷೆ ಯಾವುದು?
ಉತ್ತರ: ಪ್ರಾಕೃತ ಭಾಷೆ (ಅರ್ಧಮಾಗಧಿ)
- ಪಾರ್ಶ್ವನಾಥರು ಬೋಧಿಸಿದ ನಾಲ್ಕು ತತ್ತ್ವಗಳು ಯಾವುವು?
ಉತ್ತರ: ಅಹಿಂಸೆ, ಸತ್ಯ, ಅಸ್ತೇಯ, ಅಪರಿಗ್ರಹ
- ಮಹಾವೀರನು ಪಾರ್ಶ್ವನಾಥರ ತತ್ತ್ವಗಳಿಗೆ ಸೇರಿಸಿದ 5ನೇ ಮಹಾವ್ರತ ಯಾವುದು?
ಉತ್ತರ: ಬ್ರಹ್ಮಚರ್ಯ
- ಜೈನ ಧರ್ಮದ ತ್ರಿರತ್ನಗಳು ಯಾವುವು?
ಉತ್ತರ: ಸಮ್ಯಕ್ ಜ್ಞಾನ, ಸಮ್ಯಕ್ ದರ್ಶನ, ಸಮ್ಯಕ್ ಚಾರಿತ್ರ್ಯ
- ಮಹಾವೀರನು ನಿರ್ವಾಣ (ಮರಣ) ಹೊಂದಿದ ಸ್ಥಳ ಯಾವುದು?
ಉತ್ತರ: ಪಾವಾಪುರಿ (ಬಿಹಾರ)
- ಜೈನ ಧರ್ಮದ ಎರಡು ಪ್ರಮುಖ ಪಂಥಗಳು ಯಾವುವು?
ಉತ್ತರ: ಶ್ವೇತಾಂಬರರು ಮತ್ತು ದಿಗಂಬರರು
- ಶ್ವೇತಾಂಬರ ಪಂಥದ ನೇತೃತ್ವ ವಹಿಸಿದವರು ಯಾರು?
ಉತ್ತರ: ಸ್ಥೂಲಭದ್ರ
- ದಿಗಂಬರ ಪಂಥದ ನೇತೃತ್ವ ವಹಿಸಿದವರು ಯಾರು?
ಉತ್ತರ: ಭದ್ರಬಾಹು
- ಮೊದಲ ಜೈನ ಸಮ್ಮೇಳನ ಎಲ್ಲೆಲ್ಲಿ ಮತ್ತು ಯಾರ ಅಧ್ಯಕ್ಷತೆಯಲ್ಲಿ ನಡೆಯಿತು?
ಉತ್ತರ: ಪಾಟಲಿಪುತ್ರದಲ್ಲಿ, ಸ್ಥೂಲಭದ್ರನ ಅಧ್ಯಕ್ಷತೆಯಲ್ಲಿ
No comments:
Post a Comment