ಭಾರತದ ಸಂವಿಧಾನದ ರಚನೆ ಮತ್ತು ಮೂಲಭೂತ ಅಂಶಗಳು (1-100)
- ಭಾರತದ ಸಂವಿಧಾನ ರಚನಾ ಸಭೆಯ ಮೊದಲ ಸಭೆ ಯಾವಾಗ ನಡೆಯಿತು?
ಉತ್ತರ: 1946 ಡಿಸೆಂಬರ್ 9.
- ಸಂವಿಧಾನ ರಚನಾ ಸಭೆಯ ತಾತ್ಕಾಲಿಕ ಅಧ್ಯಕ್ಷರಾಗಿದ್ದವರು ಯಾರು?
ಉತ್ತರ: ಡಾ. ಸಚ್ಚಿದಾನಂದ ಸಿನ್ಹಾ.
- ಸಂವಿಧಾನ ರಚನಾ ಸಭೆಯ ಕಾಯಂ ಅಧ್ಯಕ್ಷರಾಗಿ ಯಾರು ಆಯ್ಕೆಯಾದರು?
ಉತ್ತರ: ಡಾ. ರಾಜೇಂದ್ರ ಪ್ರಸಾದ್.
- ಸಂವಿಧಾನದ ಕರಡು ಸಮಿತಿಯ ಅಧ್ಯಕ್ಷರು ಯಾರು?
ಉತ್ತರ: ಡಾ. ಬಿ.ಆರ್. ಅಂಬೇಡ್ಕರ್.
- ಭಾರತದ ಸಂವಿಧಾನವು ಯಾವಾಗ ಅಂಗೀಕಾರವಾಯಿತು?
ಉತ್ತರ: 1949 ನವೆಂಬರ್ 26.
- ಭಾರತದ ಸಂವಿಧಾನವು ಯಾವಾಗ ಜಾರಿಗೆ ಬಂದಿತು?
ಉತ್ತರ: 1950 ಜನವರಿ 26.
- ಸಂವಿಧಾನ ರಚನಾ ಸಭೆಯ ಸಲಹೆಗಾರರಾಗಿದ್ದವರು ಯಾರು?
ಉತ್ತರ: ಬಿ.ಎನ್. ರಾವ್.
- ಭಾರತದ ಸಂವಿಧಾನ ರಚನೆಗೆ ತಗುಲಿದ ಒಟ್ಟು ಸಮಯ ಎಷ್ಟು?
ಉತ್ತರ: 2 ವರ್ಷ, 11 ತಿಂಗಳು, 18 ದಿನಗಳು.
- ಸಂವಿಧಾನ ರಚನಾ ಸಭೆಯ ಮೊದಲ ಸಭೆ ಎಲ್ಲಿ ನಡೆಯಿತು?
ಉತ್ತರ: ನವದೆಹಲಿ (ಕೌನ್ಸಿಲ್ ಚೇಂಬರ್ ಲೈಬ್ರರಿ ಹಾಲ್).
- ಸಂವಿಧಾನದ ಮೂಲ ಪ್ರತಿಯಲ್ಲಿ ಎಷ್ಟು ವಿಧಿಗಳಿದ್ದವು?
ಉತ್ತರ: 395 ವಿಧಿಗಳು.
- ಸಂವಿಧಾನದ ಮೂಲ ಪ್ರತಿಯಲ್ಲಿ ಎಷ್ಟು ಅನುಚ್ಛೇದಗಳಿದ್ದವು?
ಉತ್ತರ: 8 ಅನುಚ್ಛೇದಗಳು (Schedule).
- ಸಂವಿಧಾನ ರಚನಾ ಸಭೆಯು ಎಷ್ಟು ಅಧಿವೇಶನಗಳನ್ನು ನಡೆಸಿತು?
ಉತ್ತರ: 11 ಅಧಿವೇಶನಗಳು.
- ಭಾರತದ ಸಂವಿಧಾನದ ಪೀಠಿಕೆಯನ್ನು ಯಾರ ಪ್ರಸ್ತಾಪನೆಯ ಆಧಾರದ ಮೇಲೆ ಸಿದ್ಧಪಡಿಸಲಾಯಿತು?
ಉತ್ತರ: ಜವಾಹರಲಾಲ್ ನೆಹರೂ (ಉದ್ದೇಶಗಳ ನಿರ್ಣಯ).
- ಭಾರತದ ಸಂವಿಧಾನವನ್ನು 'ವಕೀಲರ ಸ್ವರ್ಗ' ಎಂದು ಕರೆದವರು ಯಾರು?
ಉತ್ತರ: ಐವರ್ ಜೆನ್ನಿಂಗ್ಸ್.
- ಸಂವಿಧಾನ ಸಭೆಯ ಕಾರ್ಯದರ್ಶಿಯಾಗಿದ್ದವರು ಯಾರು?
ಉತ್ತರ: ಎಚ್.ವಿ.ಆರ್. ಅಯ್ಯಂಗಾರ್.
- ಸಂವಿಧಾನದ ಕರಡು ಸಮಿತಿಯ ಸದಸ್ಯರ ಸಂಖ್ಯೆ ಎಷ್ಟು?
ಉತ್ತರ: 7 ಸದಸ್ಯರು.
- ಕರಡು ಸಮಿತಿಯಲ್ಲಿ ಅಂಬೇಡ್ಕರ್ ಅವರನ್ನು ಹೊರತುಪಡಿಸಿ ಉಳಿದ ಆರು ಸದಸ್ಯರು ಯಾರು?
ಉತ್ತರ: ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್, ಎನ್. ಗೋಪಾಲಸ್ವಾಮಿ ಅಯ್ಯಂಗಾರ್, ಕೆ.ಎಂ. ಮುನ್ಷಿ, ಮೊಹಮ್ಮದ್ ಸಾದುಲ್ಲಾ, ಬಿ.ಎಲ್. ಮಿತ್ತರ್, ಡಿ.ಪಿ. ಖೈತಾನ್.
- ಸಂವಿಧಾನ ಸಭೆಯು ಭಾರತದ ರಾಷ್ಟ್ರಧ್ವಜವನ್ನು ಯಾವಾಗ ಅಂಗೀಕರಿಸಿತು?
ಉತ್ತರ: 1947 ಜುಲೈ 22.
- ರಾಷ್ಟ್ರಗೀತೆಯನ್ನು ಸಂವಿಧಾನ ಸಭೆಯು ಯಾವಾಗ ಅಂಗೀಕರಿಸಿತು?
ಉತ್ತರ: 1950 ಜನವರಿ 24.
- ಭಾರತದ ಸಂವಿಧಾನದ ಪೀಠಿಕೆಯನ್ನು ಸಂವಿಧಾನದ "ಆತ್ಮ" ಎಂದು ಕರೆದವರು ಯಾರು?
ಉತ್ತರ: ಠಾಕೂರ್ ದಾಸ್ ಭಾರ್ಗವ.
- ಸಂವಿಧಾನದ ಪೀಠಿಕೆಯನ್ನು "ಸಂವಿಧಾನದ ಜಾತಕ" (Horoscope) ಎಂದು ಕರೆದವರು ಯಾರು?
ಉತ್ತರ: ಕೆ.ಎಂ. ಮುನ್ಷಿ.
- ಭಾರತೀಯ ಸಂವಿಧಾನದ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
ಉತ್ತರ: ಡಾ. ಬಿ.ಆರ್. ಅಂಬೇಡ್ಕರ್.
- ಸಂವಿಧಾನ ರಚನಾ ಸಭೆಯಲ್ಲಿ ಮಹಿಳಾ ಸದಸ್ಯರ ಸಂಖ್ಯೆ ಎಷ್ಟು?
ಉತ್ತರ: 15.
- ಸಂವಿಧಾನ ರಚನಾ ಸಭೆಯು ಅಂತಿಮವಾಗಿ ಯಾವಾಗ ಸಭೆ ಸೇರಿತು?
ಉತ್ತರ: 1950 ಜನವರಿ 24.
- ಭಾರತವು ಗಣರಾಜ್ಯವಾದ ದಿನಾಂಕ ಯಾವುದು?
ಉತ್ತರ: 1950 ಜನವರಿ 26.
- ಮೂಲಭೂತ ಹಕ್ಕುಗಳನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
ಉತ್ತರ: ಅಮೆರಿಕ (USA).
- ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ದೇಶದ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
ಉತ್ತರ: ಐರ್ಲೆಂಡ್.
- ಸಂಸದೀಯ ಮಾದರಿಯ ಸರ್ಕಾರವನ್ನು ಎಲ್ಲಿಂದ ಪಡೆಯಲಾಗಿದೆ?
ಉತ್ತರ: ಬ್ರಿಟನ್.
- ಮೂಲಭೂತ ಕರ್ತವ್ಯಗಳನ್ನು ಯಾವ ದೇಶದಿಂದ ಪಡೆಯಲಾಗಿದೆ?
ಉತ್ತರ: ಸೋವಿಯತ್ ಯೂನಿಯನ್ (USSR).
- ಸಮವರ್ತಿ ಪಟ್ಟಿಯ ಪರಿಕಲ್ಪನೆಯನ್ನು ಎಲ್ಲಿಂದ ಪಡೆಯಲಾಗಿದೆ?
ಉತ್ತರ: ಆಸ್ಟ್ರೇಲಿಯಾ.
- ತುರ್ತು ಪರಿಸ್ಥಿತಿಯ ನಿಬಂಧನೆಗಳನ್ನು ಎಲ್ಲಿಂದ ಪಡೆಯಲಾಗಿದೆ?
ಉತ್ತರ: ಜರ್ಮನಿ (ವೈಮರ್ ಸಂವಿಧಾನ).
- ಸಂವಿಧಾನ ತಿದ್ದುಪಡಿ ಪ್ರಕ್ರಿಯೆಯನ್ನು ಎಲ್ಲಿಂದ ಪಡೆಯಲಾಗಿದೆ?
ಉತ್ತರ: ದಕ್ಷಿಣ ಆಫ್ರಿಕಾ.
- ರಾಜ್ಯಗಳ ಒಕ್ಕೂಟ (Union of States) ಪರಿಕಲ್ಪನೆ ಎಲ್ಲಿಂದ ಪಡೆಯಲಾಗಿದೆ?
ಉತ್ತರ: ಕೆನಡಾ.
- ಸಂವಿಧಾನದ ಅಧೀನದ ನ್ಯಾಯಾಂಗ ವ್ಯವಸ್ಥೆ ಎಲ್ಲಿಂದ ಪಡೆಯಲಾಗಿದೆ?
ಉತ್ತರ: ಜಪಾನ್.
- ಸಂವಿಧಾನದ ಪೀಠಿಕೆಯ ಭಾಷೆಯನ್ನು ಎಲ್ಲಿಂದ ಪಡೆಯಲಾಗಿದೆ?
ಉತ್ತರ: ಆಸ್ಟ್ರೇಲಿಯಾ.
- ಭಾರತದ ಸಂವಿಧಾನದ ಒಟ್ಟು ಭಾಗಗಳ ಸಂಖ್ಯೆ ಎಷ್ಟು?
ಉತ್ತರ: 22 ಭಾಗಗಳು.
- ಸಂವಿಧಾನದ ಯಾವ ವಿಧಿಯು ಭಾರತವನ್ನು 'ರಾಜ್ಯಗಳ ಒಕ್ಕೂಟ' ಎಂದು ಕರೆಯುತ್ತದೆ?
ಉತ್ತರ: ವಿಧಿ 1.
- ಹೊಸ ರಾಜ್ಯಗಳ ರಚನೆ ಅಥವಾ ಹೆಸರು ಬದಲಾವಣೆಯ ಅಧಿಕಾರ ಯಾರಿಗೆ ಇದೆ?
ಉತ್ತರ: ಸಂಸತ್ತಿಗೆ.
- ನಾಗರಿಕತ್ವಕ್ಕೆ ಸಂಬಂಧಿಸಿದ ವಿಧಿಗಳು ಯಾವುವು?
ಉತ್ತರ: ವಿಧಿ 5 ರಿಂದ 11.
- ಭಾರತದಲ್ಲಿ ಯಾವ ರೀತಿಯ ನಾಗರಿಕತ್ವವಿದೆ?
ಉತ್ತರ: ಏಕ ಪೌರತ್ವ.
- ಮೂಲಭೂತ ಹಕ್ಕುಗಳ ವಿಧಿಗಳು ಯಾವುವು?
ಉತ್ತರ: ವಿಧಿ 12 ರಿಂದ 35.
- ಸಮಾನತೆಯ ಹಕ್ಕು ಯಾವ ವಿಧಿಯಿಂದ ಯಾವ ವಿಧಿವರೆಗೆ ಇದೆ?
ಉತ್ತರ: ವಿಧಿ 14 ರಿಂದ 18.
- ಅಸ್ಪೃಶ್ಯತೆ ನಿವಾರಣೆಯ ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 17.
- ವಾಕ್ ಸ್ವಾತಂತ್ರ್ಯದ ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 19.
- ಪ್ರಾಣ ಮತ್ತು ವೈಯಕ್ತಿಕ ಸ್ವಾತಂತ್ರ್ಯದ ಹಕ್ಕು ಯಾವ ವಿಧಿಯಲ್ಲಿದೆ?
ಉತ್ತರ: ವಿಧಿ 21.
- ಶಿಕ್ಷಣದ ಹಕ್ಕನ್ನು ಯಾವ ವಿಧಿಯಲ್ಲಿ ಸೇರಿಸಲಾಗಿದೆ?
ಉತ್ತರ: ವಿಧಿ 21-A.
- ಶೋಷಣೆಯ ವಿರುದ್ಧದ ಹಕ್ಕು ಯಾವ ವಿಧಿಯಲ್ಲಿದೆ?
ಉತ್ತರ: ವಿಧಿ 23 ಮತ್ತು 24.
- ಧಾರ್ಮಿಕ ಸ್ವಾತಂತ್ರ್ಯದ ಹಕ್ಕು ಯಾವ ವಿಧಿಯಲ್ಲಿದೆ?
ಉತ್ತರ: ವಿಧಿ 25 ರಿಂದ 28.
- ಅಲ್ಪಸಂಖ್ಯಾತರ ಹಕ್ಕುಗಳ ರಕ್ಷಣೆ ಯಾವ ವಿಧಿಯಲ್ಲಿದೆ?
ಉತ್ತರ: ವಿಧಿ 29 ಮತ್ತು 30.
- ಸಂವಿಧಾನಾತ್ಮಕ ಪರಿಹಾರದ ಹಕ್ಕು ಯಾವ ವಿಧಿಯಲ್ಲಿದೆ?
ಉತ್ತರ: ವಿಧಿ 32.
- ಡಾ. ಅಂಬೇಡ್ಕರ್ ಅವರು ಯಾವ ವಿಧಿಯನ್ನು "ಸಂವಿಧಾನದ ಹೃದಯ ಮತ್ತು ಆತ್ಮ" ಎಂದು ಕರೆದರು?
ಉತ್ತರ: ವಿಧಿ 32.
- ಆಸ್ತಿಯ ಹಕ್ಕನ್ನು ಈಗ ಯಾವ ವಿಧಿಯಲ್ಲಿ ಇಡಲಾಗಿದೆ?
ಉತ್ತರ: ವಿಧಿ 300-A.
- ಆಸ್ತಿಯ ಹಕ್ಕನ್ನು ಮೂಲಭೂತ ಹಕ್ಕುಗಳ ಪಟ್ಟಿಯಿಂದ ತೆಗೆದುಹಾಕಿದ ತಿದ್ದುಪಡಿ ಯಾವುದು?
ಉತ್ತರ: 44ನೇ ತಿದ್ದುಪಡಿ (1978)
.
- ರಾಜ್ಯ ನಿರ್ದೇಶಕ ತತ್ವಗಳ ವಿಧಿಗಳು ಯಾವುವು?
ಉತ್ತರ: ವಿಧಿ 36 ರಿಂದ 51.
- ಗ್ರಾಮ ಪಂಚಾಯತ್ ಗಳ ಸಂಘಟನೆ ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 40.
- ಸಮಾನ ನಾಗರಿಕ ಸಂಹಿತೆ (Uniform Civil Code) ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 44.
- ಮೂಲಭೂತ ಕರ್ತವ್ಯಗಳನ್ನು ಯಾವ ವಿಧಿಯಲ್ಲಿ ಸೇರಿಸಲಾಗಿದೆ?
ಉತ್ತರ: ವಿಧಿ 51-A.
- ರಾಷ್ಟ್ರಪತಿಯವರ ಆಯ್ಕೆಯ ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 54.
- ರಾಷ್ಟ್ರಪತಿಯವರ ಮಹಾಭಿಯೋಗ (Impeachment) ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 61.
- ಭಾರತದ ಉಪರಾಷ್ಟ್ರಪತಿಯವರ ಹುದ್ದೆಯ ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 63.
- ಪ್ರಧಾನಮಂತ್ರಿಯವರ ನೇಮಕಾತಿಯ ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 75.
- ಭಾರತದ ಅಟಾರ್ನಿ ಜನರಲ್ ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 76.
- ಸಂಸತ್ತಿನ ರಚನೆಯ ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 79.
- ರಾಜ್ಯಸಭೆಯ ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 80.
- ಲೋಕಸಭೆಯ ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 81.
- ಸಂಸತ್ತಿನ ಜಂಟಿ ಅಧಿವೇಶನ ಕರೆಯುವವರು ಯಾರು?
ಉತ್ತರ: ರಾಷ್ಟ್ರಪತಿ.
- ಹಣಕಾಸಿನ ಮಸೂದೆಯನ್ನು ಯಾವ ಸದನದಲ್ಲಿ ಮಾತ್ರ ಮಂಡಿಸಬಹುದು?
ಉತ್ತರ: ಲೋಕಸಭೆ.
- ಭಾರತದ ಸಂಚಿತ ನಿಧಿಯ ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 266.
- ಭಾರತದ ಅಕಸ್ಮಾತ್ ನಿಧಿಯ ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 267.
- ಸುಪ್ರೀಂ ಕೋರ್ಟ್ ಸ್ಥಾಪನೆಯ ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 124.
- ಹೈಕೋರ್ಟ್ ಗಳ ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 214.
- ರಾಜ್ಯಪಾಲರ ನೇಮಕಾತಿಯ ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 155.
- ಮುಖ್ಯಮಂತ್ರಿಯವರ ನೇಮಕಾತಿಯ ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 164.
- ರಾಜ್ಯದ ಅಡ್ವೊಕೇಟ್ ಜನರಲ್ ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 165.
- ಹಣಕಾಸಿನ ಆಯೋಗದ (Finance Commission) ರಚನೆ ಯಾವ ವಿಧಿಯಲ್ಲಿದೆ?
ಉತ್ತರ: ವಿಧಿ 280.
- ಅಖಿಲ ಭಾರತ ಸೇವೆಗಳ ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 312.
- ಚುನಾವಣಾ ಆಯೋಗದ ರಚನೆ ಯಾವ ವಿಧಿಯಲ್ಲಿದೆ?
ಉತ್ತರ: ವಿಧಿ 324.
- ಭಾಷಾ ಅಲ್ಪಸಂಖ್ಯಾತರ ವಿಶೇಷ ಅಧಿಕಾರಿ ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 350-B.
- ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಆಯೋಗದ ಬಗ್ಗೆ ತಿಳಿಸುವ ವಿಧಿ ಯಾವುದು?
ಉತ್ತರ: ವಿಧಿ 338 ಮತ್ತು 338-A.
- ತುರ್ತು ಪರಿಸ್ಥಿತಿ ಘೋಷಣೆಯ ಅಧಿಕಾರ ಹೊಂದಿರುವವರು ಯಾರು?
ಉತ್ತರ: ರಾಷ್ಟ್ರಪತಿ.
- ರಾಷ್ಟ್ರೀಯ ತುರ್ತು ಪರಿಸ್ಥಿತಿ ವಿಧಿ ಯಾವುದು?
ಉತ್ತರ: ವಿಧಿ 352.
- ರಾಜ್ಯಗಳಲ್ಲಿ ಸಾಂವಿಧಾನಿಕ ಬಿಕ್ಕಟ್ಟು ಅಥವಾ ರಾಷ್ಟ್ರಪತಿ ಆಳ್ವಿಕೆ ವಿಧಿ ಯಾವುದು?
ಉತ್ತರ: ವಿಧಿ 356.
- ಹಣಕಾಸಿನ ತುರ್ತು ಪರಿಸ್ಥಿತಿ ವಿಧಿ ಯಾವುದು?
ಉತ್ತರ: ವಿಧಿ 360.
- ಸಂವಿಧಾನ ತಿದ್ದುಪಡಿ ಅಧಿಕಾರ ನೀಡುವ ವಿಧಿ ಯಾವುದು?
ಉತ್ತರ: ವಿಧಿ 368.
- ಪಂಚಾಯತ್ ರಾಜ್ ವ್ಯವಸ್ಥೆಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಯಾವುದು?
ಉತ್ತರ: 73ನೇ ತಿದ್ದುಪಡಿ.
- ನಗರಪಾಲಿಕೆಗಳಿಗೆ ಸಂಬಂಧಿಸಿದ ಸಂವಿಧಾನ ತಿದ್ದುಪಡಿ ಯಾವುದು?
ಉತ್ತರ: 74ನೇ ತಿದ್ದುಪಡಿ.
- ಭಾರತದ ಸಂವಿಧಾನವು ಯಾವ ರೀತಿಯ ಸಂವಿಧಾನವಾಗಿದೆ?
ಉತ್ತರ: ಲಿಖಿತ ಮತ್ತು ಬೃಹತ್ ಸಂವಿಧಾನ.
- ಸಂವಿಧಾನ ಸಭೆಯ ಮೊದಲ ತಾತ್ಕಾಲಿಕ ಉಪಾಧ್ಯಕ್ಷರಾಗಿದ್ದವರು ಯಾರು?
ಉತ್ತರ: ಫ್ರಾಂಕ್ ಆಂಥೋನಿ.
- ಸಂವಿಧಾನ ರಚನೆಗೆ ಪ್ರೇರಣೆಯಾದ 'ನೆಹರೂ ವರದಿ' ಬಂದ ವರ್ಷ ಯಾವುದು?
ಉತ್ತರ: 1928.
- ಭಾರತದ ಮೊದಲ ಉಪಪ್ರಧಾನಿ ಯಾರು?
ಉತ್ತರ: ಸರ್ದಾರ್ ವಲ್ಲಭಭಾಯಿ ಪಟೇಲ್.
- ಸಂವಿಧಾನ ಸಭೆಯು ಭಾರತದ ರಾಷ್ಟ್ರೀಯ ಗೀತೆಯನ್ನು ಯಾವಾಗ ಅಂಗೀಕರಿಸಿತು?
ಉತ್ತರ: 1950 ಜನವರಿ 24.
- ಸಂವಿಧಾನ ಸಭೆಯಲ್ಲಿ ಕನ್ನಡದ ಪ್ರತಿನಿಧಿಗಳಾಗಿದ್ದವರು ಯಾರು?
ಉತ್ತರ: ಕೆ.ಸಿ. ರೆಡ್ಡಿ, ಕೆಂಗಲ್ ಹನುಮಂತಯ್ಯ, ಎಸ್. ನಿಜಲಿಂಗಪ್ಪ, ಟಿ. ಸಿದ್ದಲಿಂಗಯ್ಯ, ಎಚ್. ಸಿದ್ದವೀರಪ್ಪ.
- ಸಂವಿಧಾನದ ಮೂಲ ಪ್ರತಿಯಲ್ಲಿ ಪೀಠಿಕೆಯನ್ನು ಸಂವಿಧಾನದ ಭಾಗ ಎಂದು ಸುಪ್ರೀಂ ಕೋರ್ಟ್ ಯಾವಾಗ ಘೋಷಿಸಿತು?
ಉತ್ತರ: ಕೇಶವಾನಂದ ಭಾರತಿ ಪ್ರಕರಣ (1973).
- ಭಾರತದ ಸಂವಿಧಾನದಲ್ಲಿ ಒಟ್ಟು ಎಷ್ಟು ಭಾಷೆಗಳನ್ನು ಎಂಟನೇ ಅನುಸೂಚಿಯಲ್ಲಿ ಗುರುತಿಸಲಾಗಿದೆ?
ಉತ್ತರ: 22 ಭಾಷೆಗಳು.
- ಮೂಲಭೂತ ಕರ್ತವ್ಯಗಳನ್ನು ಯಾವ ಸಮಿತಿಯ ಶಿಫಾರಸಿನ ಮೇರೆಗೆ ಸೇರಿಸಲಾಯಿತು?
ಉತ್ತರ: ಸ್ವರ್ಣಸಿಂಗ್ ಸಮಿತಿ.
- ಸಂವಿಧಾನದಲ್ಲಿ ಈಗ ಇರುವ ಒಟ್ಟು ಅನುಸೂಚಿಗಳ ಸಂಖ್ಯೆ ಎಷ್ಟು?
ಉತ್ತರ: 12 ಅನುಸೂಚಿಗಳು.
- ಸಂವಿಧಾನ ಸಭೆಯ ಕಾನೂನು ಸಲಹೆಗಾರರಾಗಿದ್ದವರು ಯಾರು?
ಉತ್ತರ: ಬಿ.ಎನ್. ರಾವ್.
- ಕರಡು ಸಮಿತಿಯ ಮುಂದೆ ಸಂವಿಧಾನವನ್ನು ಅಂತಿಮವಾಗಿ ಮಂಡಿಸಿದವರು ಯಾರು?
ಉತ್ತರ: ಡಾ. ಬಿ.ಆರ್. ಅಂಬೇಡ್ಕರ್.
- ಭಾರತೀಯ ಸಂವಿಧಾನದ ಅಂತಿಮ ವ್ಯಾಖ್ಯಾನಕಾರರು ಯಾರು?
ಉತ್ತರ: ಸುಪ್ರೀಂ ಕೋರ್ಟ್.
- ಸಂವಿಧಾನದ ಪ್ರತಿಯನ್ನು ಹಸ್ತಲಿಖಿತವಾಗಿ ಬರೆದವರು ಯಾರು?
ಉತ್ತರ: ಪ್ರೇಮ್ ಬಿಹಾರಿ ನಾರಾಯಣ ರೈಜಾದ.
Also Read :
ಭಾರತದ ಭೂಗೋಳ ಶಾಸ್ತ್ರ - ಭಾಗ 1 (ಪ್ರಶ್ನೆ 1 - 100)

No comments:
Post a Comment